ಕೊರೋನಾ ಪ್ರಕರಣದಲ್ಲಿ ತುಸು ಏರಿಕೆ

ಶುಕ್ರವಾರ, 11 ಜೂನ್ 2021 (11:08 IST)
ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೇ ಕೊರೋನಾ ಪ್ರಕರಣಗಳೂ ಏರಿಕೆಯಾಗಿದೆ.


ಕಳೆದ 24 ಗಂಟೆ ಅವಧಿಯಲ್ಲಿ 90 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದು, 3,403 ಸಾವಾಗಿದೆ. ಇದು ಕಳೆದ ಒಂದು ವಾರದಲ್ಲಿ ಗರಿಷ್ಠ ಪ್ರಕರಣವಾಗಿದೆ. ಕಳೆದ ವಾರ 80 ಸಾವಿರ ಆಸುಪಾಸಿನಲ್ಲಿ ಪ್ರಕರಣ ಕಂಡುಬಂದು ತುಸು ನೆಮ್ಮದಿ ತಂದಿತ್ತು.

ಆದರೆ ಈಗ ಕೆಲವು ರಾಜ್ಯಗಳಲ್ಲಿ ಅನ್ ಲಾಕ್ ಆಗಿದ್ದು, ಮತ್ತೆ ಕೆಲವು ರಾಜ್ಯಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆನ್ನಲ್ಲೇ ಪ್ರಕರಣ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ