ಮೃಗಾಲಯದಲ್ಲಿ ಕೊರೊನಾ ಸ್ಪೋಟ! ಜೂ ಬಂದ್

ಭಾನುವಾರ, 16 ಜನವರಿ 2022 (17:47 IST)
ಚೆನ್ನೈ : ವಂಡಲೂರು ಮೃಗಾಲಯದಲ್ಲಿ 80 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ಮುಚ್ಚಲಾಗಿದೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಸಿಬ್ಬಂದಿಯನ್ನು ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ 80 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಯಾರಿಗೂ ಯಾವುದೇ ರೋಗ ಲಕ್ಷಣಗಳಿಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೃಗಾಲಯದ ನಿರ್ದೇಶಕರಾದ ವಿ.ಕರುಣಾಪ್ರಿಯಾ ತಿಳಿಸಿದ್ದಾರೆ.

ವಂಡಲೂರು ಮೃಗಾಲಯವನ್ನು ಜ.31ರವರೆಗೆ ಮುಚ್ಚಲಾಗುವುದು. ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಮೃಗಾಲಯ ತೆರೆಯುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ