ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಇನ್ನು ಷರತ್ತುಗಳು ಅನ್ವಯ

ಸೋಮವಾರ, 12 ಜುಲೈ 2021 (08:50 IST)
ಶಬರಿಮಲೆ: ಜುಲೈ 17 ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಭಕ್ತರಿಗಾಗಿ ತೆರೆಯಲಿದೆ. ಆದರೆ ಇದರ ಜೊತಗೆ ಕೇರಳ ಸರ್ಕಾರ ಷರತ್ತೊಂದನ್ನು ವಿಧಿಸಿದೆ.


ಈ ಬಾರಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೋನಾ ನೆಗೆಟಿವ್ ಪ್ರಮಾಣ ಪತ್ರ ತರಬೇಕು ಎಂದು ಕೇರಳ ಸರ್ಕಾರ ಆದೇಶ ನೀಡಿದೆ.

ಕೊರೋನಾ ಹಿನ್ನಲೆಯಲ್ಲಿ ಕೇವಲ 5000 ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿಗೆ ಆಗಮಿಸುವವರು 48 ಗಂಟೆಯೊಳಗಿನ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ತರಬೇಕು. ಎಲ್ಲಾ ವರದಿಗಳನ್ನೂ ಆನ್ ಲೈನ್ ಮೂಲಕ ಸಲ್ಲಿಸಿದರೆ ಮಾತ್ರ ದೇವಾಲಯ ಪ್ರವೇಶಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ