ಲಸಿಕೆ ನೀಡಿಕೆಯಲ್ಲಿ ಭಾರತ ವಿಶ್ವ ದಾಖಲೆ

ಮಂಗಳವಾರ, 22 ಜೂನ್ 2021 (09:23 IST)
ನವದೆಹಲಿ: ನಿನ್ನೆ ಒಂದೇ ದಿನ 85 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದ್ದು, ಭಾರತ ಈ ಮೂಲಕ ವಿಶ್ವ ದಾಖಲೆ ಮಾಡಿದೆ.


ನಿನ್ನೆಯಿಂದ ಆರಂಭವಾದ ಲಸಿಕಾ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಲಸಿಕೆ ನೀಡಿ ದಾಖಲೆಯನ್ನೇ ಮಾಡಿದೆ.

ಕರ್ನಾಟಕದಲ್ಲೇ 11 ಲಕ್ಷಕ್ಕೂ ಅಧಿಕ ಮಂದಿಗೆ ನಿನ್ನೆ ಲಸಿಕೆ ಪಡೆದುಕೊಂಡಿದ್ದಾರೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಇದು ನಾಲ್ಕು ಪಟ್ಟು ಅಧಿಕವಾಗಿದೆ. ಇನ್ನು, ಇಡೀ ದೇಶಕ್ಕೆ ಅತೀ ಹೆಚ್ಚು ಲಸಿಕೆ ಪಡೆದುಕೊಂಡ ನಗರ ಎಂಬ ಹೆಗ್ಗಳಿಕೆ ರಾಜ್ಯ ರಾಜಧಾನಿ ಬೆಂಗಳೂರಿನ ಪಾಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ