ಕಾಶ್ಮೀರದ ಬಗ್ಗೆ ಸಭೆ ನಡೆಸಲು ಮುಂದಾದ ಮೋದಿ: ಪಾಕ್ ಕೆಂಗಣ್ಣು

ಸೋಮವಾರ, 21 ಜೂನ್ 2021 (10:21 IST)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅಲ್ಲಿನ ರಾಜಕೀಯ ನಾಯಕರೊಂದಿಗೆ ಸಭೆ ನಡೆಸಲು ಮುಂದಾದ ಪ್ರಧಾನಿ ಮೋದಿ ನಿರ್ಧಾರ ಪಾಕ್ ಕೆಂಗಣ್ಣಿಗೆ ಗುರಿಯಾಗಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಮತ್ತೆ ಕಾಶ್ಮೀರ ವಿಚಾರದಲ್ಲಿ ಕಾನೂನಿಗೆ ವಿರೋಧಿಯಾದ ಕ್ರಮ ಕೈಗೊಳ್ಳುವ ದುಸ್ಸಾಹಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದೆ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದಾಗಲೂ ಪಾಕ್ ಇನ್ನಿಲ್ಲದಂತೆ ಉರಿದುಬಿದ್ದಿತ್ತು. ಈಗ ಪ್ರಧಾನಿ ನೇತೃತ್ವದಲ್ಲಿ ಕಾಶ್ಮೀರದ ರಾಜಕೀಯ ಭವಿಷ್ಯದ ಬಗ್ಗೆ ಜೂನ್ 24 ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ ಎಂಬ ಸುದ್ದಿ ತಿಳಿದೇ ಕುದ್ದು ಹೋಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ