ಪ್ರಾಣಿಗಳ ಮೇಲಿನ ಕೊರೊನಾ ಲಸಿಕೆ ಪ್ರಯೋಗ ಯಶಸ್ವಿ; ಭಾರತ್ ಬಯೋಟೆಕ್ ಸಂಸ್ಥೆ ಮಾಹಿತಿ
ಶನಿವಾರ, 12 ಸೆಪ್ಟಂಬರ್ 2020 (11:15 IST)
ನವದೆಹಲಿ : ಭಾರತ್ ಬಯೋಟೆಕ್ ಕಂಪೆನಿ ಕಂಡುಹಿಡಿದ ಕೊರೊನಾ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಅದು ಈಗ ಯಶಸ್ವಿಯಾಗಿದೆ ಎನ್ನಲಾಗಿದೆ.
ವಿಶ್ವದಾದ್ಯಂತ ರುದ್ರ ನರ್ತನ ಮಾಡುತ್ತಿದ್ದ ಕೊರೊನಾ ವೈರಸ್ ನ್ನು ನಿಯಂತ್ರಿಸಲು ಭಾರತ್ ಬಯೋಟೆಕ್ ಕಂಪೆನಿ, ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಜೊತೆ ಸೇರಿಕೊಂಡು ಕೊವ್ಯಾಕ್ಸಿನ್ ಕೊರೊನಾ ಲಸಿಕೆಯನ್ನು ಕಂಡುಹಿಡಿದಿದೆ.
ಇದನ್ನು ಈಗ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು ಅದು ಯಶಸ್ವಿಯಾಗಿದೆ ಎಂದು ಈ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆ ಮಾಹಿತಿ ನೀಡಿದೆ.