ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು; ಭೇಟಿ ಮಾಡಿದ ಸಿಎಂಗೆ ಹೋಮ್ ಕ್ವಾರಂಟೈನ್ ಸಾಧ್ಯತೆ
ಬುಧವಾರ, 15 ಏಪ್ರಿಲ್ 2020 (10:56 IST)
ಅಹ್ಮದಾಬಾದ್ : ಗುಜರಾತ್ ನ ಜಮಾಲ್ ಪುರ-ಖಾದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಿದ ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಇದೀಗ ಕೊರೊನಾ ಭೀತಿ ಎದುರಾಗಿದೆ.
ಗುಜರಾತ್ ನ ಜಮಾಲ್ ಪುರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು ಆ ವೇಳೆ ಕಾಂಗ್ರೆಸ್ ಶಾಸಕ ಜನರನ್ನು ಭೇಟಿ ಮಾಡಿ ಸಹಾಯ ಮಾಡಿದ್ದಾರೆ. ಹಾಗೇ ಸಿಎಂ ವಿಜಯ್ ರೂಪಾನಿ ನಡೆಸಿದ ಶಾಸಕರ ಸಭೆಯಲ್ಲಿ ಈ ಕಾಂಗ್ರೆಸ್ ಶಾಸಕ ಭಾಗಿಯಾಗಿದ್ದರು. ಇದೀಗ ಕಾಂಗ್ರೆಸ್ ಶಾಸಕನಿಗೆ ಸೋಂಕು ದೃಢಪಟ್ಟಿದ್ದು, ಅವರಿಗೆ ಎಸ್ ವಿಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದೆ.
ಆದರೆ ಸಿಎಂ ವಿಜಯ್ ರೂಪಾನಿ, ಡಿಸಿಎಂ ನಿತಿನ್ ಬಾಯ್ ಪಟೇಲ್ ಮತ್ತು ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಸೇರಿ ಹಲವರು ಕಾಂಗ್ರೆಸ್ ಶಾಸಕನನ್ನು ಭೇಟಿ ಮಾಡಿದ ಹಿನ್ನಲೆಯಲ್ಲಿ ಅವರನೆಲ್ಲಾ ಹೋಮ್ ಕ್ವಾರಂಟೈನ್ ನಲ್ಲಿಡುವ ಸಾಧ್ಯತೆ ಇದೆ ಎನ್ನಲಾಗಿದೆ.