ಹೊರರಾಜ್ಯದ ಕೂಲಿಗಳಿಗೆ ಆಸರೆಯಾದ ವ್ಯಕ್ತಿ

ಮಂಗಳವಾರ, 14 ಏಪ್ರಿಲ್ 2020 (18:47 IST)
ಹೊರರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದು ಕೊರೊನಾ ಎಫೆಕ್ಟ್ ನಿಂದಾಗಿ ಲಾಕ್ ಡೌನ್ ಗೆ ಸಿಲುಕಿದ್ದ ಜನರಿಗೆ ವ್ಯಕ್ತಿಯೊಬ್ಬರು ಆಸರೆಯಾಗಿದ್ದಾರೆ.

ಹೊರರಾಜ್ಯಗಳಿಂದ ಕೆಲಸ ಅರಸಿ ಬಂದು ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಸಾವಿರಾರು ಜನಕ್ಕೆ ಇದೀಗ ಕೊರೋನಾ ವೈರಸ್ ಲಾಕ್ ಡೌನ್ ನಿಂದ ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ. ಇವರಿಗೆ ಬೆಂಗಳೂರು ನಗರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದ ಉಪಾಧ್ಯಕ್ಷ ವಸಂತ್ ಹಾಗೂ ಸ್ನೇಹಿತರ ತಂಡ ಆಸರೆಯಾಗಿದೆ.

ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಸುತ್ತಮುತ್ತಲಿನ ಏರಿಯಾಗಳಲ್ಲಿ ಸಾಕಷ್ಟು ಇಟ್ಟಿಗೆ ಕಾರ್ಖಾನೆಗಳಿದ್ದು, ಅಲ್ಲಿ ಹೆಚ್ಚು ಹೊರರಾಜ್ಯದ ಸಾವಿರಾರು ಜನ ಬಂದು ನೆಲೆಸಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಅತ್ತ ಊರಿಗೂ ಹೋಗುವುದಕ್ಕೆ ಆಗದೆ ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದರು.

ಇವರಿಗೆ ಜಿಲ್ಲಾ ಬಿಜೆಪಿ ಯುವ ಘಟಕದ ಉಪಾಧ್ಯಕ್ಷ ವಸಂತ್ ಹಾಗೂ ಸ್ನೇಹಿತರ ತಂಡವು ದಿನಕ್ಕೆ ಮೂರು‌ ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ