6 ದಿನಗಳಿಂದ ಎಣಿಸುತ್ತಿದ್ದರೂ ಮುಗಿಯದ ಎಣಿಕೆ

ಸೋಮವಾರ, 11 ಡಿಸೆಂಬರ್ 2023 (19:40 IST)
ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಈವರೆಗೂ ಪತ್ತೆಯಾದ ನಗದು ಮೊತ್ತ 500 ಕೋಟಿ ರೂಪಾಯಿ ದಾಟಿದೆ. ಇನ್ನೂ ಐಟಿ ಅಧಿಕಾರಿಗಳು ನಗದು ಎಣಿಕೆಯನ್ನು ಮುಂದುವರಿಸಿದ್ದಾರೆ. 40ಕ್ಕೂ ಹೆಚ್ಚು ಅಧಿಕಾರಿಗಳು 8ಕ್ಕೂ ಹೆಚ್ಚು ನೋಟು ಎಣಿಕೆ ಯಂತ್ರಗಳನ್ನು ಇಟ್ಟುಕೊಂಡು ನಗದು ಹಣವನ್ನು ಎಣಿಸುತ್ತಿದ್ದಾರೆ.

ಕಳೆದ ಆರು ದಿನದಿಂದಲೂ ನಗದು ಎಣಿಕೆ ನಡೆಯುತ್ತಿದೆ. ಆದರೂ ಎಣಿಕೆ ಕಾರ್ಯ ಮುಗಿದಿಲ್ಲ. ಡಿಸ್ಟಿಲರಿ ಕಂಪನಿಯಲ್ಲಿ ಸಿಕ್ಕಿರುವ ಅಕ್ರಮ ನಗದು ಹಣದ ಪ್ರಮಾಣ 400 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ದೇಶದ ಇತಿಹಾದಲ್ಲಿ ಯಾವುದೇ ತನಿಖಾ ಸಂಸ್ಥೆ ನಡೆಸಿದ ದಾಳಿಯಲ್ಲಿ ಸಿಕ್ಕ ಅತ್ಯಧಿಕ ಹಣವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್, ಅದರ ಮಾಲೀಕರು ಮತ್ತು ಇತರರ ವಿರುದ್ಧ ಸತತವಾಗಿ ದಾಳಿಗಳು ನಡೆಯುತ್ತಿವೆ. ತೆರಿಗೆ ವಂಚನೆ ಮತ್ತು 'ಆಫ್-ದಿ-ಬುಕ್' ವಹಿವಾಟಿನ ಆರೋಪದ ಮೇಲೆ ತೆರಿಗೆದಾರರು ಡಿಸೆಂಬರ್ 6 ರಂದು ದಾಳಿಗಳನ್ನು ಪ್ರಾರಂಭಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ