ನಗರದಲ್ಲಿ ಐಟಿ ದಾಳಿ-ಮಂಚದ ಕೆಳಗಿದ್ದ 42 ಕೋಟಿ ಹಣ ಸೀಜ್

ಶುಕ್ರವಾರ, 13 ಅಕ್ಟೋಬರ್ 2023 (14:21 IST)
ನಗರದಲ್ಲಿ ನೆನ್ನೆ ರಾತ್ರಿ  ಐಟಿ ಅಧಿಕಾರಿಗಳು ಗುತ್ತಿಗೆದಾರ ಹಾಗೂ ಮಾಜಿ ಕಾರ್ಪರೇಟರ್ ಮನೆ ಮೇಲೆ ದಾಳಿ ನಡೆಸಿದ್ದದಾರೆ. ದಾಳಿ ವೇಳೆ ಮಂಚದ‌ ಕೆಳಗೆ 23 ಬಾಕ್ಸ್ ಗಳಲ್ಲಿ ಅಡಗಿಸಿದ್ದ 42   ಕೋಟಿ ಹಣ ಪತ್ತೆಯಾಗಿದೆ.  ಆರ್ ಟಿ ನಗರದ ಆತ್ಮಾನಂದ ಕಾಲೋನಿಯ ಒಂದು ಫ್ಲಾಟ್ ನಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ರಾಜಸ್ಥಾನ ಚುನವಣೆಗೆ ಹಣ ಸಾಗಿಸಲು ಈ ಹಣವನ್ನೂ ಇಟ್ಟಿದ್ದಾಗಿ ತಿಳಿದುಬಂದಿದೆ. 
 
ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು ಎನ್ನಲಾದ ಮಾಹಿತಿಯಿದೆ.ನೆನ್ನೆ ಸಂಜೆ 6ಗಂಟೆಗೆ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಎಂಟ್ರಿ ಕೊಟ್ಟ ಐಟಿ ಅಧಿಕಾರಿಗಳು ನಡೆಸಿದ್ದಾರೆ.  ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಪತಿ ಅಂಬಿಕಾಪತಿ ಸಹೋದರನಿಗೆ ಸೇರಿದ ಪ್ಲಾಟ್ ಎಂದು ತಿಳಿದು ಬಂದಿದೆ. ಇತ್ತ‌ಅಶ್ವತ್ಥಮ ಮನೆ ಮೇಲೂ ದಾಳಿ ನಡೆದಿದೆ.ಏಕಕಾಲದಲ್ಲಿ ಆರ್ ಟಿ ನಗರದ ಎರಡು ಸ್ಥಳಗಳಲ್ಲಿ ದಾಳಿ ನಡೆದಿದೆ.ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿಯಾಗಿರುವ ಅಶ್ವಥಮ್ಮ ಮಾಜಿ‌ ಕಾರ್ಪೊರೇಟರ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ