ವಿವಾಹಕ್ಕೆ ವಿರೋಧ: 225 ನಿದ್ರೆಮಾತ್ರೆಗಳನ್ನು ಸೇವಿಸಿದ ಪ್ರೇಮಿಗಳು

ಬುಧವಾರ, 12 ಏಪ್ರಿಲ್ 2017 (14:00 IST)
ಪೋಷಕರು ವಿವಾಹಕ್ಕೆ ವಿರೋಧಿಸಿದ ಹಿನ್ನೆಲೆಯಲ್ಲಿ ಕನಿಷ್ಠ 225 ನಿದ್ರೆ ಮಾತ್ರೆಗಳನ್ನು ಸೇವಿಸಿದ ಪ್ರೇಮಿಗಳು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಆದರೆ, ಪ್ರಯತ್ನದಲ್ಲಿ ಯುವಕ ಸಾವನ್ನಪ್ಪಿದರೆ ಯುವತಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.  
 
ಶೋಲಿಂಗ್‌‍ನಲ್ಲೂರ್ ನಿವಾಸಿಯಾದ 30 ವರ್ಷ ವಯಸ್ಸಿನ ಡಿ.ಶಿವಗುರುನಾಥನ್ ಮತ್ತು ಪೆರಂಬೂರ್‌ ನಿವಾಸಿಯಾಗಿರುವ 23 ವರ್ಷ ವಯಸ್ಸಿನ ಚಿತ್ರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
 
ಪ್ರೇಮಿಗಳು ಮಹಾಬಲೀಪುರಂನಲ್ಲಿರುವ ರೆಸಾರ್ಟ್‌ನಲ್ಲಿ ರೂಮ್ ಬಾಡಿಗೆ ಪಡೆದಿದ್ದಾರೆ. ಆದರೆ, ಕೋಣೆಯಿಂದ ಪ್ರೇಮಿಗಳಉ ಹೊರಬರದಿರುವುದರಿಂದ ಅನುಮಾನಗೊಂಡ ರೆಸಾರ್ಟ್ ಸಿಬ್ಬಂದಿಗಳು ಕೋಣೆಯ ಬಾಗಿಲನ್ನು ಬಡಿದಿದ್ದಾರೆ. ಕೊನೆಗೂ ಚಿತ್ರಾ ಕೋಣೆಯ ಬಾಗಿಲು ತೆರೆದಿದ್ದಾಳೆ. ನಾವು ಆತ್ಮಹತ್ಯೆ ಮಾಡಿಕೊಳ್ಳಲು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದೇವೆ  ಎಂದು ಹೇಳಿ ಪ್ರಜ್ಞೆ ಕಳೆದುಕೊಂಡಿದ್ದಾಳೆ.  
 
ಶಿವಗುರುನಾಥನ್‌ನನ್ನು ಮಹಾಬಲೀಪುರಂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ. ಚಿತ್ರಾಳನ್ನು ಚೆಂಗಲ್‌ಪೇಟ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.   
 
ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರೇಮಿಗಳು ವಾಸವಾಗಿದ್ದ ಕೋಣೆಯ ತಪಾಸಣೆ ನಡೆಸಿದಾಗ ಆತ್ಮಹತ್ಯೆ ಪತ್ರ ದೊರೆತಿದೆ. ಪೋಷಕರು ವಿವಾಹಕ್ಕೆ ವಿರೋಧಿಸಿದ್ದರಿಂದ ಆತ್ಮಹತ್ಯೆಗೆ ಶರಣಾಗಬೇಕಾಯಿತು ಎಂದು ಪತ್ರದಲ್ಲಿ ಬರೆಯಲಾಗಿದೆ.
 
ಪೊಲೀಸರು ಪ್ರಕರಣಧ ವಿಚಾರಣೆ ನಡೆಸಿದಾಗ ಶಿವಗುರುನಾಥನ್ ಮತ್ತು ಚಿತ್ರಾ ಟಿ.ನಗರ್‌ದಲ್ಲಿರುವ ಖಾಸಗಿ ಭಧ್ರತಾ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದು, ಮೂರು ವರ್ಷಗಳಿಂದ ಪ್ರೀತಿಸತೊಡಗಿದ್ದರು ಎನ್ನುವುದು ಬೆಳಕಿಗೆ ಬಂದಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ