ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ವೃದ್ಧನಿಗೆ ತಕ್ಕ ಶಾಸ್ತಿ ಮಾಡಿದ ಕೋರ್ಟ್
ತನ್ನ ಅಂಗಡಿಗೆ ಚಾಕಲೇಟ್ ಕೊಳ್ಳಲು ಬಂದ 6 ವರ್ಷದ ಬಾಲಕಿಗೆ ಮತ್ತಷ್ಟು ಚಾಕಲೇಟ್ ಕೊಡುವುದಾಗಿ ಅಮಿಷ ತೋರಿಸಿ ಅಂಗಡಿ ಹಿಂದಿನ ಕೊಠಡಿಗೆ ಕರೆದೊಯ್ದು ವೃದ್ಧ ಅತ್ಯಾಚಾರವೆಸಗಿದ್ದ. ಬಳಿಕ ಇದನ್ನು ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ.
ಆದರೆ ಬಾಲಕಿ ಈ ವಿಚಾರವನ್ನು ತನ್ನ ತಾಯಿಗೆ ಹೇಳಿದ್ದಳು. ಅದರಂತೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಇದೀಗ ಸಂತ್ರಸ್ತ ಬಾಲಕಿಗೆ ಸರ್ಕಾರ 10 ಲಕ್ಷ ರೂ. ಪರಿಹಾರ ಮತ್ತು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.