ಅಪ್ರಾಪ್ತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಖುಲಾಸೆ ಮಾಡಿದ ನ್ಯಾಯಾಲಯ
ಸಂತ್ರಸ್ತನ ದೂರಿನಲ್ಲಿ ಅಸಹಜತೆ ಕಾಣಿಸುತ್ತಿದೆ. ಆ ಮಧ್ಯವಯಸ್ಕನಿಗೆ ಬಾಲಕನ ಪರಿಚಯವೇ ಇರಲಿಲ್ಲ. ಮತ್ತು ಮಹಿಳಾ ಪೊಲೀಸ್ ಪೇದೆಯೊಬ್ಬರು ನೀಡಿದ ಹೇಳಿಕೆಯಲ್ಲೂ ವ್ಯತ್ಯಾಸ ಕಾಣುತ್ತಿದೆ.
ಹೀಗಾಗಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ವ್ಯಕ್ತಿಯನ್ನು ಆರೋಪ ಮುಕ್ತಗೊಳಿಸಲಾಗಿದೆ. ಇದಕ್ಕೂ ಮೊದಲು ಕೆಳ ಹಂತದ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಆ ಶಿಕ್ಷೆ ರದ್ದಾಗಿದೆ.