ಸಿಹಿ ಸುದ್ದಿ! ಮಕ್ಕಳಿಗೂ ಬರಲಿದೆ ಕೊರೋನಾ ಲಸಿಕೆ

ಬುಧವಾರ, 12 ಮೇ 2021 (09:37 IST)
ನವದೆಹಲಿ: ಕೊರೋನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿತವಾಗಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಬಯೋಟೆಕ್ ಸಂಸ್ಥೆ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.
 


2 ರಿಂದ 18 ವರ್ಷದವರೆಗಿನ ಮಕ್ಕಳಿಗೆ ನೀಡಬಹುದಾದ ಕೋವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ತಜ್ಞರು ಇದರ 2/3 ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಿದ್ದಾರೆ.

ನವಂಬರ್ ಬಳಿಕ ಕೊರೋನಾ ಮೂರನೇ ಅಲೆ ಬರಬಹುದು ಎನ್ನಲಾಗುತ್ತಿದೆ. ಹೀಗಾಗಿ ಅದಕ್ಕೂ ಮೊದಲು ಮಕ್ಕಳಿಗೂ ವ್ಯಾಕ್ಸಿನ್ ಕಂಡುಹಿಡಿಯುವ ನಿಟ್ಟಿನಲ್ಲಿ ಬಯೋಟೆಕ್ ಸಂಸ್ಥೆ ಕಾರ್ಯನಿರತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ