ಬೆಂಗಳೂರು: ತಮ್ಮ ಹಳ್ಳಿಯಲ್ಲಿ ಉಂಟಾಗಿರುವ ಕೊರೋನಾ ಭೀಕರತೆ ಬಗ್ಗೆ ಸಾಹಿನಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ತಲೆಮಾರು ಇಂಥಾ ಕರಾಳ ದಿನಗಳಿಗೆ ಸಾಕ್ಷಿಯಾದೀತು ಎಂದು ಯಾರೂ ಎಣಿಸಿರಲಿಲ್ಲ. ಶತಾಯ ಗತಾಯ ಹೋರಾಡಿ ಹಾಸಿಗೆ ಪಡೆದುಕೊಂಡರೂ ದಾಖಲಾಗುವ ಮೊದಲೇ ನಾಲ್ವರು ಮಾರ್ಗ ಮಧ್ಯದಲ್ಲಿ ಮೃತ್ಯು ಮಂಚವೇರಿದ್ದಾರೆ. ಕ್ಷೇಮವೆಂದು ನಂಬಿದ್ದ ನನ್ನ ಹಳ್ಳಿಯಲ್ಲೂ ಸಾಲು ಸಾಲಾಗಿ ಹೆಣ ಬೀಳುತ್ತಿದೆ. ಎಲ್ಲರೂ ಅಹಾಯಕರಂತೆ ಕಾಣುತ್ತಿದ್ದೇವೆ ಎಂದು ನಾಗತಿಹಳ್ಳಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಕೊರೋನಾ ವಿಚಾರದಲ್ಲಿ ಸಾಲು ಸಾಲು ಸಂದೇಶಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಾಗತಿಹಳ್ಳಿ ತಮ್ಮ ಆಪ್ತರನ್ನು ಕಳೆದುಕೊಂಡ ದುಃಖವನ್ನು ಹಂಚಿಕೊಂಡಿದ್ದಾರೆ.