ಕಾಗೆ ಮಾಡಿದ ಈ ಕೆಲಸಕ್ಕೆ ನೆಟ್ಟಿಗರು ಫಿದಾ

ಸೋಮವಾರ, 26 ಆಗಸ್ಟ್ 2019 (10:01 IST)
ನವದೆಹಲಿ : ಮನುಷ್ಯರು ಪರಿಸರದ ಬಗ್ಗೆ ಕಾಳಜಿ ವಹಿಸದ ಈ ಕಾಲದಲ್ಲಿ ಮೂಕ ಪ್ರಾಣಿ ಕಾಗೆ ಪರಿಸರದ ಬಗ್ಗೆ ಕಾಳಜಿ  ತೊರಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು. ಮನುಷ್ಯರು ಎಲ್ಲೆಂದರಲ್ಲಿ ಕಸವನ್ನು ಎಸೆದು ಪರಿಸರವನ್ನು ಹಾಳುಮಾಡುತ್ತಿರುವಾಗ ಕಾಗೆಯೊಂದು ಬಳಸಿದ ಪ್ಲಾಸ್ಟಿಕ್ ಬಾಟಲಿಯನ್ನು ಕಸದ ಬುಟ್ಟಿಗೆ ಹಾಕಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


2.2 ಮಿಲಿಯನ್ ಮಂದಿ ಈ ವಿಡಿಯೋ ನೋಡಿದ್ರೆ, 1.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 64 ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ. ಒಂದು ಕಾಗೆ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ, ಡಸ್ಟ್ ಬಿನ್ ಗೆ ಹಾಕೋದಾದ್ರೆ ಮನುಷ್ಯ ಯಾಕೆ ಮಾಡಲ್ಲ? ಎಂದು ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ