ಕಚ್ಚಾ ತೈಲ : ಭಾರತದ ಮೇಲೆ ಪರಿಣಾಮ ಏನು?

ಬುಧವಾರ, 5 ಏಪ್ರಿಲ್ 2023 (14:30 IST)
ಭಾರತ ಶೇ.85 ರಷ್ಟು ತೈಲವನ್ನು ಆಮದು ಮಾಡುತ್ತಿದೆ. ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಭಾರತದ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಬೆಲೆಯನ್ನು ಏರಿಕೆ ಮಾಡದ ಪರಿಣಾಮ ತೈಲ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿದೆ.

ಸೋಮವಾರ ಒಂದು ಬ್ಯಾರೆಲ್ ಕಚ್ಚಾ ಬ್ರೆಂಟ್ ಕಚ್ಚಾ ತೈಲ ದರ ಶೇ.5 ರಷ್ಟು ಏರಿಕೆಯಾಗಿದ್ದು ಈಗ 84 ಡಾಲರ್ಗೆ (ಅಂದಾಜು 6,900 ರೂ.) ಏರಿಕೆಯಾಗಿದೆ. 2023ರ ಕೊನೆಗೆ ಇದು 90-95 ಡಾಲರ್ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ದರವನ್ನು ಪರಿಷ್ಕರಣೆ ಮಾಡದೇ ಇದ್ದರೆ ಕಂಪನಿಗಳ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ತೈಲ ದರ ಏರಿಕೆ ಮಾಡಿದರೆ ಇತ್ತ ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ