ರಾಮಮಂದಿರದ ಬಗ್ಗೆ ವ್ಯಾಟ್ಸಪ್ ನಲ್ಲಿ ಬರುತ್ತಿರುವ ಈ ಆಫರ್ ಬಗ್ಗೆ ಹುಷಾರು!

Krishnaveni K

ಶುಕ್ರವಾರ, 12 ಜನವರಿ 2024 (11:01 IST)
ನವದೆಹಲಿ: ದೇಶದೆಲ್ಲೆಡೆ ಈಗ ಅಯೋಧ‍್ಯೆ ರಾಮಮಂದಿರ ಎಂಬ ಹೆಸರು ಕೇಳಿದರೆ ಸಾಕು ಆಸ್ತಿಕ ಭಕ್ತರ ಕಿವಿ ನೆಟ್ಟಗಾಗುತ್ತಿದೆ. ಇದನ್ನೇ ಸೈಬರ್ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ.

ಜನವರಿ 22 ರಂದು ಲೋಕಾರ್ಪಣೆಗೊಳ್ಳುತ್ತಿರುವ ರಾಮಮಂದಿರ ವೀಕ್ಷಿಸಬೇಕೆಂಬ ಹಂಬಲ ಎಲ್ಲರಿಗೂ ಇದೆ. ಸಾರ್ವಜನಿಕರಿಗೆ ರಾಮಮಂದಿರ ವೀಕ್ಷಿಸಲು ಯಾವಾಗ ಅವಕಾಶ ಸಿಗುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ.

ಈ ನಡುವೆ ವ್ಯಾಟ್ಸಪ್ ನಲ್ಲಿ ಅಯೋಧ‍್ಯೆ ರಾಮಮಂದಿರಕ್ಕೆ ಉಚಿತ ವಿಐಪಿ ದರ್ಶನ ಕೊಡಿಸುವುದಾಗಿ ಸಂದೇಶವೊಂದು ಬರುತ್ತಿದೆ. ಇದಕ್ಕಾಗಿ ಒಂದು ಲಿಂಕ್ ನೀಡಿ ತೆರೆಯಲು ಹೇಳಲಾಗುತ್ತಿದೆ. ಆದರೆ ಇದನ್ನು ನಂಬಿ ಯಾರೂ ಲಿಂಕ್ ಓಪನ್ ಮಾಡಲು ಹೋಗಬೇಡಿ. ಇದು ವಂಚಕರ ಜಾಲ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.

ಅಯೋಧ್ಯೆಗೆ ವಿಐಪಿ ಪಾಸ್ ಕೊಡಿಸುವುದಾಗಿ ಸೈಬರ್ ಕಳ್ಳರು ಲಿಂಕ್ ಕಳುಹಿಸಿ ವಂಚನೆ ಮಾಡುತ್ತಿದ್ದಾರೆ. ಇದರಿಂದ ನೀವು ಇಂತಹ ಯಾವುದೇ ವದಂತಿಗಳನ್ನು ನಂಬಿ ಲಿಂಕ್ ಓಪನ್ ಮಾಡಲು ಹೋಗಬೇಡಿ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಅನುಮಾನಾಸ್ಪದವಾಗಿ ಬರುವ ಫೈಲ್, ಲಿಂಕ್ ಗಳನ್ನು ಓಪನ್ ಮಾಡಬೇಡಿ. ಈ ರೀತಿ ಸೈಬರ್ ಕಳ್ಳರು ಜನರ ಬ್ಯಾಂಕ್ ಖಾತೆಗೆ ಅಥವಾ ಹಣಕ್ಕೆ ಕನ್ನ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ