ಕಾಂಗ್ರೆಸ್ ಸೀಸನಲ್ ಹಿಂದೂ: ಅಯೋಧ್ಯೆಗೆ ಬರಲೊಪ್ಪದ ಕಾಂಗ್ರೆಸ್ ಗೆ ಕೇಂದ್ರ ಸಚಿವರ ಟೀಕೆ

Krishnaveni K

ಗುರುವಾರ, 11 ಜನವರಿ 2024 (10:34 IST)
ನವದೆಹಲಿ: ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ರಾಮಮಂದಿರ ಕಾರ್ಯಕ್ರಮಕ್ಕೆ ಬರಲೊಪ್ಪದ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಮತ್ತು ಬೆಂಬಲಿಗರು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರವನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ. ಇದು ಬಿಜೆಪಿ ಮತ್ತು ಆರ್ ಎಸ್ಎಸ್ ರಾಮಮಂದಿರ ಎಂದು ಕಾಂಗ್ರೆಸ್ ತನಗೆ ಬಂದ ಆಹ್ವಾನವನ್ನು ತಿರಸ್ಕರಿಸಿದೆ. ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದ ಘಟಾನುಘಟಿ ನಾಯಕರಿಗೆ ಆಹ್ವಾನವಿತ್ತರೂ ಹಾಜರಿರುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.

ಇದೇ ವಿಚಾರವನ್ನು ಈಗ ಬಿಜೆಪಿ ಅಸ್ತ್ರವಾಗಿ ಬಳಸಿದೆ. ಕಾಂಗ್ರೆಸ್ ಒಂದು ರೀತಿಯಲ್ಲಿ ಸೀಸನಲ್ ಹಿಂದೂ. ಕಾಲೋಚಿತವಾಗಿ ಧರ್ಮ ಬದಲಾಯಿಸುತ್ತದೆ. ವೋಟ್ ಬೇಕಾದಾಗ ಹಿಂದೂಗಳ ಬಗ್ಗೆ ಮೃದು ಧೋರಣೆ ತಾಳುತ್ತಾರೆ. ಜವಹರಲಾಲ್ ನೆಹರೂ ಅವಧಿಯಿಂದ ಇಲ್ಲಿಯವರೆಗೆ ಯಾವ ಕಾಂಗ್ರೆಸಿಗರೂ ಅಯೋಧ್ಯೆಗೆ ತೆರಳಿಲ್ಲ. ಅಯೋಧ್ಯೆ ಪ್ರಕರಣ  ಕೋರ್ಟ್ ನಲ್ಲಿ ಬಾಕಿಯಾಗಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿತ್ತು. ಹೀಗಾಗಿ ಆ ಪಕ್ಷಕ್ಕೆ ಅಯೋಧ್ಯೆಗೆ ಹೋಗುವ ನೈತಿಕತೆಯೂ ಇಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ