ಕಳೆದ ಮೇ ತಿಂಗಳಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದತ್ಯನಾಥ್ ಖುಷಿನಗರ್ ಜಿಲ್ಲೆಯ ಮೇನ್‌ಪುರ್ ದೀನಾಪಟ್ಟಿ ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮುಶಾಹರ್ ದಲಿತ ಸಮುದಾಯದವರಿಗೆ ಸಾಬೂನ್‌ಗಳು, ಸುಗಂಧ ದೃವ್ಯ ಮತ್ತು ಶಾಂಪೂಗಳನ್ನು ನೀಡಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಾಗ ಸಾಬೂನ್, ಶಾಂಪು ಬಳಸಿ ಸ್ಥಾನ ಮಾಡಿ ಶುಚಿಯಾಗಿರಬೇಕು ಎಂದು ಅಧಿಕಾರಿಗಳು ಆದೇಶ ನೀಡಿದ್ದರು.
ಇದೀಗ, ದಲಿತರನ್ನು ಭೇಟಿ ಮಾಡುವ ಮುನ್ನ ಸಿಎಂ ಯೋಗಿ ಆದಿತ್ಯನಾಥ್ 16 ಅಡಿ ಉದ್ದದ ಸಾಬೂನ್‌ನಲ್ಲಿ ಸ್ಥಾನ ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಉಡುಗೊರೆಯಾಗಿ ನೀಡಿದ್ದೇವೆ ಎಂದು ಡಾ. ಅಂಬೇಡ್ಕರ್ ವೆಚನ್ ಪ್ರತಿಭಂದ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಸಮಿತಿ ಸದಸ್ಯ ಮಾರ್ಟಿನ್ ಮಾಕ್ವಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತೀಯ ಸಮಾಜದಲ್ಲಿ ಜಾತಿ ತತ್ವವನ್ನು ವಿರೋಧಿಸುವ ದೃಷ್ಟಿಯಿಂದ ಬೌದ್ಧಮತವನ್ನು ಅನುಸರಿಸಿದ ಅಂಬೇಡ್ಕರ್ ಅವರ 125 ನೇ ಜನ್ಮದಿನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್‌ಗೆ ಉಡುಗೊರೆ ಕೊಡುವ ಬಗ್ಗೆ ಆಲೋಚನೆ ಬಂದಿದೆ ಎಂದು ತಿಳಿಸಿದ್ದಾರೆ.