ಲಾಲು ಪ್ರಸಾದ್ಗೆ ಕಿಡ್ನಿ ನೀಡಲು ಮುಂದಾದ ಪುತ್ರಿ

ಗುರುವಾರ, 10 ನವೆಂಬರ್ 2022 (13:36 IST)
ಪಾಟ್ನಾ : ಕಳೆದ ಹಲವಾರು ವರ್ಷಗಳಿಂದ ಮೂತ್ರಪಿಂಡ ಕಾಯಿಲೆ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಆರ್ಜೆಡಿ (ರಜದ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಪುತ್ರಿ ರೋಹಿಣಿ ಆಚಾರ್ಯ ತಮ್ಮ ಕಿಡ್ನಿಯಲ್ಲಿ ಒಂದನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಇದರಿಂದ ಲಾಲು ಪ್ರಸಾದ್ ಯಾದವ್ ಹೊಸ ಜೀವನವನ್ನು ಪಡೆದುಕೊಳ್ಳಲಿದ್ದಾರೆ. ಅಕ್ಟೋಬರ್ನಲ್ಲಿ ಸಿಂಗಾಪುರಕ್ಕೆ ಭೇಟಿ ಕೊಟ್ಟ ಲಾಲು ಪ್ರಸಾದ್ ಯಾದವ್ ಅವರಿಗೆ, ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು.

ಈ ಬಳಿಕ ರೋಹಿಣಿ ಅವರು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಲು ಮುಂದಾಗಿದ್ದಾರೆ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಮೊದಲಿಗೆ ರೋಹಿಣಿ ಕಿಡ್ನಿಯನ್ನು ಪಡೆಯಲು ಲಾಲು ಪ್ರಸಾದ್ ಒಪ್ಪಿಕೊಳ್ಳಲಿಲ್ಲ. ಆದರೆ ಆಕೆಯ ಮತ್ತು ಕುಟುಂಬಸ್ಥರ ಒತ್ತಡದ ಮೇರೆಗೆ ಕೊನೆಗೆ ಕಿಡ್ನಿ ಪಡೆಯಲು ಒಪ್ಪಿಕೊಂಡಿದ್ದಾರೆ.

ನವೆಂಬರ್ 20 ರಿಂದ 24ರ ಒಳಗೆ ಲಾಲು ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ