ಪ್ರಿಯಕರನೊಂದಿಗೆ ಪುತ್ರಿ: ರೆಡ್‌ಹ್ಯಾಂಡ್‌ ಹಿಡಿದ ತಂದೆ ಮಾಡಿದ್ದೇನು ಗೊತ್ತಾ?

ಮಂಗಳವಾರ, 12 ಡಿಸೆಂಬರ್ 2023 (09:45 IST)
ಯುವತಿ ಬೇರೆ ಸಮುದಾಯದ ಯುವಕನೊಂದಿಗೆ ಪ್ರೀತಿಸುತ್ತಿದ್ದರಿಂದ ತಂದೆ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಪ್ರಿಯಕರನೊಂದಿಗೆ ಪುತ್ರಿಯನ್ನು ಕಂಡ ಕೋಪದ ಭರದಲ್ಲಿ ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ. 
 
ಶಂಕಿತ ಮರ್ಯಾದೆ ಹತ್ಯೆ ಪ್ರಕರಣವೊಂದರಲ್ಲಿ ಒಂದೇ ಕೋಣೆಯಲ್ಲಿ ಪ್ರಿಯತಮನೊಂದಿಗೆ ರೆಡ್‌ಬ್ಯಾಂಡ್ ಸಿಕ್ಕಿ ಬಿದ್ದ ಬಿಎಸ್‌ಸಿ ಓದುತ್ತಿದ್ದ 19 ವರ್ಷದ ಪುತ್ರಿಯನ್ನು ಕೋಪದ ಭರದಲ್ಲಿ ತಂದೆ ಗುಂಡಿಟ್ಟು ಹತ್ಯೆಗೈದಿದ್ದಾನೆ.
 
ಪುತ್ರಿ ತನ್ನ ಬಾಯ್‌ಫ್ರೆಂಡ್‌ ನೊಂದಿಗೆ ತನ್ನ ಕೋಣೆಯಲ್ಲಿ ಮಾತನಾಡುತ್ತಿರುವಾಗ ತಂದೆ ಅಶೋಕ್ ಸಿಕಾರ್ವರ್ ಕೋಪದಿಂದ ಗುಂಡಿಟ್ಟು ಹತ್ಯೆ ಮಾಡಿ ನಂತರ ಪೊಲೀಸರಿಗೆ ಮತ್ತು ಸಂಬಂಧಿಕರಿಗೆ ಕರೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ