ಪುತ್ರಿಯ ಮೇಲೆ ಅತ್ಯಾಚಾರವೆಗಿದ ಆರೋಪಿಗೆ 10 ವರ್ಷ ಜೈಲು

ಗುರುವಾರ, 7 ಡಿಸೆಂಬರ್ 2023 (12:29 IST)
ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಸೈಮಂವಂಗಾ ಮಗಳ ಪೋಷಣೆ ಜವಾಬ್ದಾರಿಯನ್ನು ಹೊತ್ತಿದ್ದ. 2013ರಲ್ಲಿ ಆಕೆಯ ಮೇಲಾತ ನಿರಂತರವಾಗಿ ಅತ್ಯಾಚಾರ ಮಾಡಿದ್ದ. ಯಾರಿಗೂ ಹೇಳದಿರುವಂತೆ ಆತ ಬೆದರಿಕೆ ಒಡ್ಡಿದ್ದರಿಂದ ಮಗಳು ಮೌನವನ್ನು ತಾಳಿಕೊಂಡಿದ್ದಳು. ಆದರೆ, ತಂದೆಯ ಕಾಮದಾಹಕ್ಕೆ ಬೆದರಿದ ಪುತ್ರಿ ಕೊನೆಗೂ ಬಾಯಿ ಬಿಟ್ಟಿದ್ದಾಳೆ.
 
ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದ ಪೈಶಾಚಿಕ ಮನಸ್ಥಿತಿಯ ತಂದೆಗೆ  ಕೋರ್ಟ್ 10 ವರ್ಷಗಳ ಕಠಿಣ  ಕಾರಾಗೃಹವಾಸವನ್ನು ಜಾರಿಗೊಳಿಸಿದೆ. ಲುಂಗ್ಲೈ ಜಿಲ್ಲಾ ಮತ್ತು ಸೆಷನ್ಸ್ ನಾಯಾಲಯದ ನ್ಯಾಯಮೂರ್ತಿ ಮರ್ಲಿ ವಂಕುಂಗ್ ಆರೋಪಿ ಸೈಮಂವಂಗಾನಿಗೆ 2,000 ರೂಪಾಯಿ ದಂಡವನ್ನು ಕೂಡ ವಿಧಿಸಿದ್ದಾರೆ.
 
ಆದರೆ ಆತನ ಪೀಡೆ ಹೆಚ್ಚುತ್ತಲೇ ಹೋದಾಗ ತಾಯಿಯ ಬಳಿ ಎಲ್ಲ ಸಂಗತಿಯನ್ನು ಹೇಳಿಕೊಂಡಳು. ತಾಯಿ- ಮಗಳು ನೈನಿತಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ