ರೈಲಿನಲ್ಲಿ ಕೊಟ್ಟ ಬಿರಿಯಾನಿಯಲ್ಲಿತ್ತು ಸತ್ತ ಹಲ್ಲಿ..!

ಬುಧವಾರ, 26 ಜುಲೈ 2017 (12:00 IST)
ರೈಲಿನಲ್ಲಿ ಸರಬರಾಜು ಮಾಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ ಎಂದು ಸಂಸತ್ತಿಗೆ ಆಡಿಟರ್ ವರದಿ ಸಲ್ಲಿಸಿ 2 ದಿನ ಕಳೆಯುವಷ್ಟರಲ್ಲಿ ರೈಲ್ವೆ ಆಹಾರದ ನಿಜ ಬಣ್ಣ ಬಯಲಾಗಿದೆ. ಉತ್ತರಪ್ರದೇಶದ ಪೂರ್ವ ಎಕ್ಸ್`ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಿದ ೂಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ.
 

ಜಾರ್ಖಂಡ್`ನಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಯಾತ್ರಿಕರು ಆರ್ಡರ್ ಮಾಡಿದ್ದ ವೆಜ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಪಾಟ್ನಾ ಬಳಿ ಸಂಚರಿಸುತ್ತಿದ್ದಾಗ ಓರ್ವ ಪ್ರಯಾಣಿಕ ಅಸ್ವಸ್ಥನಾಗಿದ್ದಾನೆ. ಬಳಿಕ ಪ್ರಯಾಣಿಕರೆಲ್ಲರೂ ಊಟವನ್ನ ಹೊರಗೆ ಬಿಸಾಡಿದ್ದಾರೆ. ಟಿಕೆಟ್ ಪರೀಕ್ಷಕ ಮತ್ತು ಪ್ಯಾಂಟ್ರಿ ಸಿಬ್ಬಂದಿ ಹೇಳಿದಾಗಲೂ ಸೂಕ್ತ ಪ್ರತಿಕ್ರಿಯೆ ಬಾರದಿದ್ದಾಗ ಪ್ರಯಾಣಿಕರೆಲ್ಲರೂ ರೈಲ್ವೆ ಸಚಿವರಿಗೆ ಟ್ವಿಟ್ ಮಾಡಿದ್ಧಾರೆ.

ಟ್ವೀಟ್ ಬಳಿ ರೈಲು ಮುಘಲ್ ಸರಜ್ ನಿಲ್ದಾಣಕ್ಕೆ ಬರುತ್ತಲೇ ಔಷಧಿ ಜೊತೆ ಬಂದ ವೈದ್ಯಾಧಿಕಾರಿಗಳು ಅಸ್ವಸ್ಥ ಪ್ರಯಾಣಿಕರಿಗೆ ಚಿಕಿತ್ಸೆ ನೀಡಿದ್ದಾರೆ. ಘಟನೆ ಕುರಿತಂತೆ ತನಿಖೆ ನಡೆಸುತ್ತಿರುವ ಻ಧಿಕಾರಿಗಳು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ