ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಖ್ಯಾತ ವಕೀಲ ಕಪಿಲ್ ಸಿಬಲ್, ತಮ್ಮ ಕಕ್ಷಿದಾರ ಯಾವತ್ತೂ ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಕೈವಾಡಿವಿದೆ ಎಂದು ಹೇಳಿಲ್ಲ. ಆದರೆ, ಆರೆಸ್ಸೆಸ್‌ಗೆ ಸಂಬಂಧಿಸಿದ ವ್ಯಕ್ತಿಗಳು ಗಾಂಧಿಯವರ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆರೆಸ್ಸೆಸ್ ಅಪರಾಧಿಗಳ ತಾಣವಾಗಿದೆ ಎಂದು ಎಂದೆಂದಿಗೂ ಹೇಳಿಲ್ಲ ಎಂದು ವಾದ ಮಂಡಿಸಿದ್ದಾರೆ.
ಏತನ್ಮಧ್ಯೆ, ಆರೆಸ್ಸೆಸ್ ಕಾರ್ಯಕರ್ತನ ಪರ ವಕೀಲ ಉಮೇಶ್ ಲಲಿತ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ತಮ್ಮ ಕಕ್ಷಿದಾರರಿಂದ ಕೆಲ ಮಾಹಿತಿಗಳು ಪಡೆಯುವುದು ಅಗತ್ಯವಾಗಿದ್ದರಿಂದ ಸಮಯ ನೀಡುವಂತೆ ನ್ಯಾಯಾಲಯಕ್ಕೆ ಕೋರಿದ್ದರಿಂದ ಸೆಪ್ಟೆಂಬರ್ 1 ರ ವರೆಗೆ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದ್ದಾರೆ.