ಜನಸಂಘದ ಸ್ಥಾಪಕ, ಬಿಜೆಪಿ ಹರಿಕಾರ ಪ್ರೇಮನಾಥ್ ದೋಗ್ರಾ ಅವರ ಸ್ಮರಣಾರ್ಥ ಸಂಬಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನ್ನಾಡುತ್ತಿದ್ದ ಅವರು, ಕಾಶ್ಮೀರದಲ್ಲಿ ದಂಗೆ ಮತ್ತು ಕಲ್ಲು ತೂರಾಟವನ್ನು ಸಮರ್ಥಿಸಿಕೊಳ್ಳುವವರು ಕ್ಷುಲ್ಲಕ ರಾಜಕೀಯದ ಹೊರತಾಗಿ ತಮ್ಮ ತಲೆಯಲ್ಲಿ ಮತ್ತೇನನ್ನೂ ಹೊಂದಿಲ್ಲ ಎಂದು ಗುಡುಗಿದ್ದಾರೆ.
ಮೂರು ಯುದ್ಧಗಳಲ್ಲಿ ಭಾರತದ ಕೈಯ್ಯಿಂದ ಹೀನಾಯ ಸೋಲು ಕಂಡ ಪಾಕಿಸ್ತಾನ 1990ರಲ್ಲಿ ನಮ್ಮ ವಿರುದ್ಧ ಪ್ರಾಕ್ಸಿ ಯುದ್ಧವನ್ನು ಪ್ರಾರಂಭಿಸಿತು. 2008-1010ರಲ್ಲಿ ಅವರು ತಮ್ಮ ಪ್ರಾಕ್ಸಿ ಕದನಕ್ಕೆ ಕಲ್ಲು ತೂರಾಟದ ಹೊಸ ಮುಖವನ್ನು ಪರಿಚಯಿಸಿದರು. ಮತ್ತೀಗ ಆಗುತ್ತಿರುವುದು ಸಹ ಅದೇ. ಉಗ್ರವಾದ ಮತ್ತು ಕಲ್ಲು ತೂರಾಟವನ್ನು ದೃಢವಾಗಿ ವ್ಯವಹರಿಸಬೇಕು. ಇಂತಹ ಸನ್ನಿವೇಶಗಳನ್ನು ನಿಭಾಯಿಸುವಾಗ ಯಾವುದೇ ಶಿಥಿಲತೆಯನ್ನು ತೋರಬಾರದು ಎಂದಿದ್ದಾರೆ ಜೇಟ್ಲಿ.