ಯುವತಿಗೆ ಪರಿಚಿತನಾಗಿದ್ದ ಭದ್ರತಾ ಸಿಬ್ಬಂದಿಯೊಬ್ಬ ಮತ್ತುಬರಿಸುವ ತಂಪು ಪಾನೀಯ ನೀಡಿದ್ದಾನೆ. ಆಕೆ ತಂಪು ಪಾನೀಯ ಕುಡಿಯುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಕೆಲ ಸಮಯದ ನಂತರ ಪ್ರಜ್ಞೆ ಮರಳಿದಾಗ ನಗ್ನಾವಸ್ಥೆಯಲ್ಲಿರುವುದು ಕಂಡು ಅನುಮಾನವಾಗಿದೆ. ಕೂಡಲೇ ಅಲ್ಲಿಂದ ತೆರಳಿ ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾಳೆ.