ದೀಪಾವಳಿ ನಂತರ ದೆಹಲಿ ಸ್ಥಿತಿ ಗಂಭೀರ

ಗುರುವಾರ, 19 ಅಕ್ಟೋಬರ್ 2017 (08:52 IST)
ನವದೆಹಲಿ:  ದೀಪಾವಳಿ ಬಂತೆಂದರೆ ದೆಹಲಿ ಜನತೆ ಆತಂಕಪಡುವಂತಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯು ಮಾಲಿನ್ಯ ದೆಹಲಿ ಜನತೆಯ ಕಂಗೆಡಿಸಿದೆ.

 
ಪಟಾಕಿ ಹೊಗೆ ಜತೆಗೆ ಪಕ್ಕದ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೃಷಿ ಭೂಮಿಯಲ್ಲಿ ಒಣಗಿದ ಸಸಿಗಳನ್ನು ಸುಡುವ ಪ್ರಕ್ರಿಯೆ ನಡೆಯುತ್ತದೆ. ಇದರಿಂದಾಗಿ ದೆಹಲಿ ಬೀದಿ ತುಂಬಾ ಹೊಗೆ ತುಂಬುತ್ತದೆ.

ಕಳೆದ ವರ್ಷವೂ ಇದೇ ರೀತಿ ದೆಹಲಿ ಜನ ಪಡಬಾರದ ಬವಣೆ ಅನುಭವಿಸಿದ್ದರು. ವಿಮಾನ ಸಂಚಾರ ರದ್ದಾಗಿದ್ದರೆ, ರಣಜಿ ಪಂದ್ಯಗಳೂ ರದ್ದಾಗಿದ್ದವು. ಈ ಬಾರಿಯೂ ಅದೇ ರೀತಿಯಾಗುವ ಅಪಾಯದಲ್ಲಿ ದೆಹಲಿ ಜನತೆಯಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ