ಶಿಕ್ಷಕರ ವೇತನದಲ್ಲಿ ಶೇ.90 ರಷ್ಟು ಹೆಚ್ಚಳಗೊಳಿಸಿದ ಕೇಜ್ರಿವಾಲ್ ಸರಕಾರ

ಗುರುವಾರ, 8 ಡಿಸೆಂಬರ್ 2016 (21:00 IST)
ಸಿಟಿಇಟಿ ಪಾಸಾದ ದೆಹಲಿ ಅತಿಥಿ ಉಪನ್ಯಾಸಕರ ವೇತನದಲ್ಲಿ ಶೇ,90 ರಷ್ಟು ಹೆಚ್ಚಳಗೊಳಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
 
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ವೇತನ ಹೆಚ್ಚಳ ಕುರಿತಂತೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಕೇಜ್ರಿವಾಲ್, ನಾನ್-ಸಿಟಿಇಟಿ ಶಿಕ್ಷಕರ ವೇತನದಲ್ಲೂ ಶೇ.44 ರಷ್ಟು ಹೆಚ್ಚಳಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 
 
ದೆಹಲಿಯಲ್ಲಿ 17 ಸಾವಿರ ಅತಿಥಿ ಉಪನ್ಯಾಸಕರು ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 2000 ಶಿಕ್ಷಕರು ಸಿಟಿಇಟಿ ಪರೀಕ್ಷೆ ಪಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ. 
 
ಸರಕಾರ 17 ಸಾವಿರ ಶಿಕ್ಷಕರ ವೇತನದಲ್ಲಿ ಹೆಚ್ಚಳಗೊಳಿಸಿದ್ದಲ್ಲದೇ ಸಿಟಿಇಟಿ ಪಾಸಾದ ಶಿಕ್ಷಕರಿಗೆ ಎಂಟು ಸಾಮಾನ್ಯ ರಜೆಗಳನ್ನು ಮಂಜೂರು ಮಾಡಲಾಗಿದೆ. ಇದೀಗ ಪ್ರತಿಯೊಬ್ಬ ಶಿಕ್ಷಕರು ಮಾಸಿಕವಾಗಿ ನಿಗದಿತ ವೇತನ ಪಡೆಯಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ