ರಾಜೀನಾಮೆ ಕೊಡಲು ಬಂದ ದೆಹಲಿ ಸಿಎಂ ಅತಿಶಿ ಬಳಿ ನಿಮಗೆ ಯಮುನ ತಾಯಿಯ ಶಾಪ ಎಂದರಾ ಗವರ್ನರ್

Krishnaveni K

ಸೋಮವಾರ, 10 ಫೆಬ್ರವರಿ 2025 (16:34 IST)
ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಬಂದಾಗ ಸಿಎಂ ಅತಿಶಿ ಬಳಿ ಲೆಫ್ಟಿನೆಂಟ್ ಗವರ್ನರ್ ನಿಮಗೆ ಯಮುನೆಯ ಶಾಪ ಎಂದಿದ್ದಾರಂತೆ.

ಹೀಗೊಂದು ವರದಿಯಾಗುತ್ತಿದೆ. ಮೊನ್ನೆಯಷ್ಟೇ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿತ್ತು. ಬಿಜೆಪಿ 48 ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರಕ್ಕೇರಿದರೆ ಆಡಳಿತಾರೂಢ ಎಎಪಿ 22 ಸ್ಥಾನಗಳೊಂದಿಗೆ ಅಧಿಕಾರ ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಅತಿಶಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.

ಈ ವೇಳೆ ಸಿಎಂ ಅತಿಶಿ ಬಳಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ನಿಮಗೆ ಯಮುನಾ ತಾಯಿಯ ಶಾಪ ಎಂದಿದ್ದಾರಂತೆ. ಅಧಿಕಾರದಲ್ಲಿದ್ದಾಗ ಯಮುನಾ ನದಿ ಶುದ್ಧೀಕರಣ ಮಾಡುವಂತೆ ಎಷ್ಟೋ ಬಾರಿ ಹೇಳಿದ್ದೆ. ಆದರೆ ನನ್ನ ಸಲಹೆಯನ್ನು ಸ್ವೀಕರಿಸದೇ ಸಾರ್ವಜನಿಕರ ಹಿತಾಸಕ್ತಿ ಮರೆತಿರಿ. ಅದಕ್ಕೇ ಈಗ ಈ ಪರಿಸ್ಥಿತಿಯಾಗಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ವೇಳೆಯೂ ಯಮುನಾ ನದಿ ವಿಚಾರ ಭಾರೀ ಸುದ್ದಿಯಾಗಿತ್ತು. ಬಿಜೆಪಿ ಯಮುನಾ ನದಿಗೆ ವಿಷ ಬೆರೆಸಿ ದೆಹಲಿಗೆ ರವಾನಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದು ಭಾರೀ ಸುದ್ದಿಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ