ಯಮುನಾ ನದಿಗೆ ವಿಷ: ಅರವಿಂದ್ ಕೇಜ್ರಿವಾಲ್ ಗೆ ಬಿಗ್ ಚಾಲೆಂಜ್ ಕೊಟ್ಟ ಚುನಾವಣಾ ಆಯೋಗ

Krishnaveni K

ಗುರುವಾರ, 30 ಜನವರಿ 2025 (16:14 IST)
ನವದೆಹಲಿ: ಯಮುನಾ ನದಿಗೆ ಹರ್ಯಾಣದಿಂದ ವಿಷ ಬೆರೆಸಿ ದೆಹಲಿಗೆ ಹರಿಯಬಿಡಲಾಗುತ್ತಿದೆ ಎಂದು ಆರೋಪ ಹೊರಿಸಿದ್ದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಗೆ ಚುನಾವಣಾ ಆಯೋಗ ಬಿಗ್ ಚಾಲೆಂಜ್ ನೀಡಿದೆ.

ಯಮುನಾ ನದಿಗೆ ಬಿಜೆಪಿ ನಾಯಕರು ಹರ್ಯಾಣದಲ್ಲಿ ವಿಷ ಹಾಕಿ ದೆಹಲಿಗೆ ಕಳುಹಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದರು. ಇದರ ಬಗ್ಗೆ ಪ್ರಧಾನಿ ಮೋದಿ ಕೂಡಾ ಕೆಂಡಾಮಂಡಲರಾಗಿದ್ದು ನಾನೂ ಕೂಡಾ ಇದೇ ನೀರು ಕುಡಿಯುತ್ತೇನೆ. ಯಮುನಾ ನದಿಗೆ ವಿಷ ಬೆರೆಸಲಾಗುತ್ತಿದೆ ಎಂದು ಕೇಜ್ರಿವಾಲ್ ಹರ್ಯಾಣ ಮಾತ್ರವಲ್ಲ, ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದಿದ್ದರು.

ಇನ್ನು, ಚುನಾವಣಾ ಆಯೋಗಕ್ಕೂ ಎಎಪಿ ಈ ಬಗ್ಗೆ ದೂರು ನೀಡಿತ್ತು. ಇದರ ಜೊತೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕೇಜ್ರಿವಾಲ್ ಚುನಾವಣಾ ಆಯೋಗವನ್ನೇ ಟೀಕಿಸಿದ್ದರು. ಇದರ ಬೆನ್ನಲ್ಲೇ ಚುನಾವಣಾ ಆಯೋಗ ಖಡಕ್ ಸವಾಲು ಮುಂದಿಟ್ಟಿದೆ.

ಯಮುನಾ ನದಿಗೆ ವಿಷ ಬೆರೆಸಲಾಗುತ್ತಿದೆ ಎಂದು ಸುಮ್ಮನೇ ಆರೋಪ ಹೊರಿಸಿದರೆ ಸಾಲದು. ಯಮುನಾ ನದಿಗೆ ವಿಷ ಬೆರೆಸಲಾಗುತ್ತಿದೆ ಎಂದು ಜನರಲ್ಲಿ ಭಯ ಹುಟ್ಟಿಸಿದ್ದೀರಿ. ಹರ್ಯಾಣದ ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಸಾಕ್ಷ್ಯ ಕೊಡಬೇಕು. ನಾಳೆ ಬೆಳಿಗ್ಗೆ 11 ಗಂಟೆಯೊಳಗೆ ಸಾಕ್ಷ್ಯ ಕೊಡಬೇಕು ಎಂದು ಚುನಾವಣಾ ಆಯೋಗ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ