Delhi Metroದಲ್ಲಿ ಮಗು ಬಿತ್ತೆಂದು ಗಲಾಟೆ ಮಾಡಿದ ಕುಟುಂಬ: ಮಗು ನಿಜವಾಗಿ ಎಲ್ಲಿತ್ತು ವಿಡಿಯೋ ನೋಡಿ
ದೆಹಲಿ ಮೆಟ್ರೋದಲ್ಲಿ ನಡೆದ ಘಟನೆ ಇದಾಗಿದೆ. ಅಮ್ಮ, ಮಗು ಸೇರಿದಂತೆ ಇಡೀ ಪರಿವಾರವೇ ಮೆಟ್ರೋ ಏರುತ್ತದೆ. ಆದರೆ ರೈಲು ಚಲಿಸಲು ಆರಂಭಿಸಿದಾಗ ಮಗು ತಮ್ಮ ಜೊತೆಗಿಲ್ಲ ಎನ್ನುವುದು ಪರಿವಾರದವರಿಗೆ ಅರಿವಾಗಿದೆ.
ತಕ್ಷಣವೇ ಮೆಟ್ರೋದಲ್ಲಿ ದೊಡ್ಡ ಗಲಾಟೆಯನ್ನೇ ಎಬ್ಬಿಸುತ್ತಾರೆ. ನಮ್ಮ ಮಗು ಹಳಿಗೆ ಬಿದ್ದು ಹೋಗಿದೆ ಎಂದು ಅಮ್ಮ ಸೇರಿದಂತೆ ಇಡೀ ಕುಟುಂಬದವರು ಮೆಟ್ರೋ ಪೂರ್ತಿ ಓಡಾಡಿ ದಾಂಧಲೆ ಎಬ್ಬಿಸುತ್ತಾರೆ.
ಕೊನೆಗೆ ಮೆಟ್ರೋ ನಿಂತು ಮಗುವಿಗಾಗಿ ಹುಡುಕಾಡಿದಾಗ ಮಗು ಫ್ಲ್ಯಾಟ್ ಫಾರಂನಲ್ಲಿಯೇ ಸೀಟ್ ನಲ್ಲಿ ಕೂತಿರುತ್ತದೆ. ಮಗುವನ್ನು ಬಿಟ್ಟು ಪರಿವಾರದವರು ಮೆಟ್ರೋ ರೈಲು ಏರಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.