ದೆಹಲಿ ಶಾಸಕರಿಗೆ ಕೇಜ್ರಿವಾಲ್ ಸಿಎಂ ರಾಜೀನಾಮೆ ಬೇಕಂತೆ!

ಭಾನುವಾರ, 30 ಏಪ್ರಿಲ್ 2017 (07:05 IST)
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಕ್ಷದ ಶಾಸಕರೇ ತಿರುಗಿಬಿದ್ದಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.

 
ಆಮ್ ಆದ್ಮಿ ಪಕ್ಷದ ಶಾಸಕರಿಗೆ ಈಗ ಕೇಜ್ರಿವಾಲ್ ಗಿಂತ ಡಾ. ಕುಮಾರ್ ವಿಶ್ವಾಸ್ ಮೇಲೆ ಹೆಚ್ಚು ಒಲವಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಅಲ್ಲದೆ ಸುಮಾರು 34 ಶಾಸಕರು ಕೇಜ್ರಿವಾಲ್ ರಾಜೀನಾಮೆ ಬಯಸುತ್ತಿದ್ದು, ಕುಮಾರ್ ವಿಶ್ವಾಸ್ ರನ್ನು ಸಿಎಂ ಆಗಿ ನೋಡಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

ದೆಹಲಿ ಚುನಾವಣೆಯಲ್ಲೂ ಸೋತ ನಂತರ ಸ್ವತಃ ವಿಶ್ವಾಸ್, ಪಕ್ಷ ಯಾವುದೇ ಬದಲಾವಣೆಗೂ ಸಿದ್ಧವಿದೆ ಎನ್ನುವ ಮೂಲಕ ಬಿಜೆಪಿ ಹೇಳಿಕೆಗೆ ಪುಷ್ಠಿ ನೀಡಿದೆ. ಅಲ್ಲದೆ, ಸ್ವತಃ ಪಕ್ಷದ ಸಂಸ್ಥಾಪಕ, ಕೇಜ್ರಿವಾಲ್ ಕೂಡಾ ನಾವು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದಿದ್ದರು.

ಇನ್ನು ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ದೂರುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಗೆಲ್ಲಬೇಕಾದರೆ ಏನಾದರೂ ಬದಲಾವಣೆ ಮಾಡಲೇಬೇಕು ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಹೀಗಾಗಿ ಎಎಪಿಯಲ್ಲಿ ನಾಯಕತ್ವ ಬದಲಾವಣೆಯಾಗುತ್ತಾ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ