ಸಿಬಿಐಗೆ ಹೊಸ ಸಾರಥಿ

ಶುಕ್ರವಾರ, 20 ಜನವರಿ 2017 (10:22 IST)
ದೆಹಲಿ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಲೋಕ್ ಕುಮಾರ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಸಿಬಿಐ ನೂತನ ಸಾರಥಿಯನ್ನು ನೇಮಿಸಿದೆ. 
ಪ್ರಧಾನಿ ನೇತೃತ್ವದಲ್ಲಿ ನಡೆದ ಮೂರು ಸದಸ್ಯರುಳ್ಳ ಉನ್ನತ ಮಟ್ಟದ ಸಭೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. 
 
ಅನಿಲ್ ಸಿನ್ಹಾ ನಿವೃತ್ತಿ ಬಳಿಕ ಕಳೆದ 50 ದಿನಗಳಿಂದ ಈ ಹುದ್ದೆ ಖಾಲಿ ಇತ್ತು. ಅವರ ನಿರ್ಗಮನದ ಬಳಿಕ ರಾಕೇಶ್ ಆಸ್ತಾನಾ ಹಂಗಾಮಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮತ್ತೀಗ ಪೊಲೀಸ್ ಇಲಾಖೆಯಲ್ಲಿ 36 ವರ್ಷಗಳ ಅನುಭವ ಹೊಂದಿರುವ ಅಲೋಕ್ ಕುಮಾರ್ ಸಿಬಿಐ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. 
 
1979ನೇ ಬ್ಯಾಚ್​ನ ಅರುಣಾಚಲ ಪ್ರದೇಶ-ಗೋವಾ- ಮಿಜೊರಾಂ ಹಾಗೂ ಕೇಂದ್ರಾಡಳಿತ ಪ್ರದೇಶದ ಕೇಡರ್​ನ ಅಧಿಕಾರಿಯಾದ ಇವರು ಸಿಬಿಐ ಮುಖ್ಯಸ್ಥರ ಸಂಭಾವ್ಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. 
 
ತಿಹಾರ್ ಜೈಲಿನ ಮಹಾನಿರ್ದೇಶಕರಾಗಿ, ಮಿಜೊರಾಂನ ಪೊಲೀಸ್ ಇಲಾಖೆ ಮುಖ್ಯಸ್ಥ, ದೆಹಲಿ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಹೆಚ್ಚುವರಿ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಅಲೋಕ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ