ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವು, ಹಲವರಿಗೆ ಗಾಯ

Sampriya

ಶನಿವಾರ, 27 ಜುಲೈ 2024 (16:58 IST)
Photo Courtesy X
ಮುಂಬೈ: ನವಿ ಮುಂಬೈನ ಬೇಲಾಪುರ ಪ್ರದೇಶದಲ್ಲಿ ಶನಿವಾರ ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿ,ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಎನ್‌ಡಿಆರ್‌ಎಫ್ ಅಧಿಕಾರಿಯ ಪ್ರಕಾರ ಇಬ್ಬರು ವ್ಯಕ್ತಿಗಳನ್ನು ರಕ್ಷಿಸಲಾಗಿದ್ದು, ಒಬ್ಬ ಸಿಲುಕಿಕೊಂಡಿದ್ದಾರೆ ಎಂದಿದ್ದಾರೆ.  ಕಟ್ಟಡದ ಎರಡನೇ ಮಹಡಿಯಲ್ಲಿ ಬಿರುಕು ಬಿಟ್ಟ ಸದ್ದು ಕೇಳಿದ ನಿವಾಸಿಗಳು ಸಮೀಪದ ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಇನ್ನೂ ಈ ದುರ್ಘಟನೆಯಲ್ಲಿ  ಗಾಯಗೊಂಡ ಇಬ್ಬರ ಸ್ಥಿತಿ ಸ್ಥಿರವಾಗಿದೆ.

ಮೃತರನ್ನು ಮೊಹಮ್ಮದ್ ಮೆರಾಜ್ (30) ಮತ್ತು ಶಫೀಕ್ ಅನ್ಸಾರಿ (29) ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯ ಮೃತದೇಹವನ್ನು ವಾಶಿಯಲ್ಲಿರುವ ಎನ್‌ಎಂಎಂಸಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

ಎನ್‌ಡಿಆರ್‌ಎಫ್ ರಕ್ಷಣಾ ತಂಡವು ಅವಶೇಷಗಳಡಿ ಸಿಲುಕಿದ್ದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕೂಡಲೇ ವಾಶಿಯಲ್ಲಿರುವ ಎನ್‌ಎಂಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ಮಾಡಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಣೆ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ