ನಾಗರಹೊಳೆ ನ್ಯಾಷನಲ್ ಪಾರ್ಕ್ ಗೆ ರಾಜೀವ್ ಗಾಂಧಿ ಹೆಸರೇಕೆ? ಆನ್ ಲೈನ್ ಅಭಿಯಾನ ಶುರು
ಶನಿವಾರ, 7 ಆಗಸ್ಟ್ 2021 (09:42 IST)
ಬೆಂಗಳೂರು: ಕ್ರೀಡಾಳುಗಳ ಅತ್ಯುನ್ನತ ಸಾಧನೆ ಗುರುತಿಸಿ ನೀಡಲಾಗುವ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ನ್ನು ಮೇಜರ್ ಧ‍್ಯಾನ್ ಚಂದ್ ಖೇಲ್ ರತ್ನ ಅವಾರ್ಡ್ ಎಂದು ಕೇಂದ್ರ ಸರ್ಕಾರ ಪುನರ್ ನಾಮಕರಣ ಮಾಡಿದ ಬೆನ್ನಲ್ಲೇ ಈಗ ಕರ್ನಾಟಕದಲ್ಲೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಎಂದು ಆನ್ ಲೈನ್ ಅಭಿಯಾನ ಶುರುವಾಗಿದೆ.
ಖೇಲ್ ರತ್ನ ಪ್ರಶಸ್ತಿ ಮಾಜಿ ಪ್ರಧಾನಿಯ ಹೆಸರು ಬದಲಾಯಿಸಿ ಹಾಕಿ ದಿಗ್ಗಜನ ಹೆಸರು ನೀಡಿ ಗೌರವ ಸಲ್ಲಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ನಾಗರಹೊಳೆ ನ್ಯಾಷನಲ್ ಪಾರ್ಕ್ ಗೆ ಇದಕ್ಕೆ ಸಂಬಂಧವೇ ಇಲ್ಲದ ಮಾಜಿ ಪ್ರಧಾನಿಯೊಬ್ಬರ ಹೆಸರನ್ನು ಇರಿಸಿದ್ದು ಸರಿಯಲ್ಲ. ಇದು ಕೇವಲ ಒಂದು ರಾಜಕೀಯ ಕುಟುಂಬವನ್ನು ಮೆಚ್ಚಿಸಲು ರಾಜೀವ್ ಗಾಂಧಿ ಹೆಸರಿಡಲಾಗಿದೆ.
ಅದರ ಬದಲು ನಮ್ಮ ಹೆಮ್ಮೆಯ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಹೆಸರು ಇಡಬೇಕು ಎಂದು ಇಲ್ಲಿನ ಸ್ಥಳೀಯರು ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾಗೆ ಇ-ಪಿಟಿಷನ್ ನೀಡಿದ್ದಾರೆ.