ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿಯನ್ನು ಮುಂದುವರೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ದೇಶಕ್ಕೆ ಆರ್ಥಿಕ ವಿಪತ್ತನ್ನು ಸೃಷ್ಟಿಸಿದ್ದಾರೆ, ಪ್ರಧಾನಿಯಾಗಿ ಮುಂದುವರೆಯಲು ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಗುಡುಗಿದ್ದಾರೆ.
ರಾಜ್ಯ ಸಚಿವಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, "ಇದರಲ್ಲಿ ಒಂದು ತಂಡವಾಗಿ ಕೆಲಸ ನಿರ್ವಹಿಸಿರುವುದು ಕಂಡು ಬರುವುದಿಲ್ಲ. ಇದು ಏಕವ್ಯಕ್ತಿ ಸರ್ವಾಧಿಕಾರತ್ವ. ಸೃಷ್ಟಿಯಾಗಿರುವುದು ಮಾನವ ನಿರ್ಮಿತ ವಿಪತ್ತು. ಮತ್ತಿದು ಅಪಾಯಕಾರಿ ಪ್ರವೃತ್ತಿ ಎಂದು ಕಿಡಿಕಾರಿದರು.