ನೋಟು ನಿಷೇಧ ಆಘಾತ: ಹೊಸ 500, 2000 ನೋಟುಗಳ ವರದಕ್ಷಿಣೆ ನೀಡದ್ದರಿಂದ ನವವಿವಾಹಿತೆ ಹತ್ಯೆ

ಗುರುವಾರ, 1 ಡಿಸೆಂಬರ್ 2016 (13:24 IST)
ನೋಟು ನಿಷೇಧದಿಂದಾಗಿ ದೇಶಾದ್ಯಂತ 90 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ವರದಿಗಳಿವೆ. ನೋಟು ಹಾವಳಿಯಿಂದಾದ ಹಾನಿ ಅಷ್ಟಿಷ್ಟಲ್ಲ. ಇದೀಗ ಮತ್ತೊದು ಜೀವ ನೋಟು ನಿಷೇಧಕ್ಕೆ ಬಲಿಯಾಗಿದೆ.
 
500 ಮತ್ತು 2000 ಹೊಸನೋಟುಗಳಿರುವ 1.70 ಲಕ್ಷ ರೂಪಾಯಿ ವರದಕ್ಷಿಣೆ ತರಲಿಲ್ಲ ಎನ್ನುವ ಕಾರಣಕ್ಕೆ ನವವಿವಾಹಿತೆಯೊಬ್ಬಳನ್ನು ಆಕೆ ಪತಿಯ ಕುಟುಂಬದವರು ಹತ್ಯೆ ಮಾಡಿದ ಹೇಯ ಘಟನೆ ವರದಿಯಾಗಿದೆ. 
 
ವಧುವಿನ ತಂದೆ ವಿವಾಹದ ಸಂದರ್ಭದಲ್ಲಿ 1.70 ಲಕ್ಷ ರೂಪಾಯಿ ವರದಕ್ಷಿಣೆ ನೀಡುವುದಾಗಿ ಅಳಿಯನ ಕುಟುಂಬದವರಿಗೆ ಮಾತುಕೊಟ್ಟಿದ್ದರು. ಆದರೆ,ಬ್ಯಾಂಕ್‌ಗಳಲ್ಲಿ ಹಣದ ಕೊರತೆ ಎದುರಾಗಿದ್ದರಿಂದ ಹಣ ದೊರೆತಿರಲಿಲ್ಲ. ಇದರಿಂದ ಆಕ್ರೋಶಗೊಂಡು ಪತಿಯ ಕುಟುಂಬದವರು ಆಕೆಯನ್ನು ಹತ್ಯೆ ಮಾಡಿದ್ದಾರೆ.
 
ವಧು ಪ್ರಭಾತಿಯ ವಿವಾಹ ಅದೇ ಗ್ರಾಮದ ಲಕ್ಷ್ಮಿ ನಾಯಕ್ ಎಂಬಾತನೊಂದಿಗೆ ನಿಶ್ಚಯವಾಗಿತ್ತು. ನವೆಂಬರ್ 9 ರಂದು ವಿವಾಹದ ದಿನಾಂಕ ನಿಗದಿಪಡಿಸಲಾಗಿತ್ತು. ವಧುವಿನ ತಂದೆ ವಿವಾಹದ ದಿನದಂದು ವರದಕ್ಷಿಣೆ ನೀಡಲು ನಿರ್ಧರಿಸಿದ್ದರು,
 
ಆದರೆ, ನವೆಂಬರ್ 8 ರಂದು ಪ್ರಧಾನಿ ಮೋದಿ ನೋಟು ನಿಷೇಧ ಘೋಷಿಸಿದ್ದರಿಂದ ಆಘಾತಗೊಂಡಿದ್ದರು. ಮಾರನೇ ದಿನ ಬ್ಯಾಂಕ್‌ಗೆ ಹೋಗಿ ಹಣ ಕೇಳಿದಾಗ, ಬ್ಯಾಂಕ್‌ನಲ್ಲಿ ಹಣವಿಲ್ಲವಾದ್ದರಿಂದ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ವಧುವಿನ ತಂದೆ ಹಳೆಯ 500 ಮತ್ತು 1000 ರೂಪಾಯಿಗಳ 1.70 ಲಕ್ಷ ರೂಪಾಯಿ ನೀಡಲು ಹೋದಾಗ ವರನ ಕುಟುಂಬದವರು ಹಣ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಬ್ಯಾಂಕ್‌ಗಳಲ್ಲಿ ಹೊಸ ನೋಟುಗಳು ದೊರೆಯುತ್ತಿಲ್ಲ ಎಂದು ಪರಿಪರಿಯಾಗಿ ಕೇಳಿಕೊಂಡರು ವರನ ಮನ ಕರಗಲಿಲ್ಲ ಎನ್ನಲಾಗಿದೆ.
 
ಮಾರನೇ ದಿನ ವಧುವಿನ ಹತ್ಯೆಯಾದ ಸುದ್ದಿ ವರದಿಯಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿದ ವಧುವಿನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ