ನಾಲ್ಕು ಬಾರಿ ಪ್ರೀತಿಯಲ್ಲಿ ಬಿದ್ದರೂ, ರತನ್ ಟಾಟಾ ಬ್ಯಾಚುಲರ್ ಆಗಿಯೇ ಉಳಿದಿದ್ದೇಕೆ

Sampriya

ಗುರುವಾರ, 10 ಅಕ್ಟೋಬರ್ 2024 (11:31 IST)
Photo Courtesy X
ನವದೆಹಲಿ: ಎಲ್ಲರೂ ಪ್ರೀತಿಸುವ ಹಾಗೂ ಗೌರವಿಸುವ ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಅವರು ನಮ್ಮಿಂದ್ದ ದೂರವಾಗಿದ್ದಾರೆ.  ಇವರ ನಿಧನಕ್ಕೆ ವಿಶ್ವವೇ ಕಂಬನಿ ಮಿಡಿಯುತ್ತಿದೆ. ದೇಶವೇ ಕೊಂಡಾಡುವ ರತನ್ ಟಾಟಾ ಅವರು ಜೀವನಪೂರ್ತಿ ಬ್ಯಾಚುಲರ್ ಆಗಿಯೇ ಲೈಪ್ ಕಳೆದರು. ಟಾಟಾ ಅವರಿಗೆ ಮದುವೆ ಬಗ್ಗೆ ಆಸಕ್ತಿಯಿದ್ದರೂ, ಅವರಿಗೆ ಕಂಕನ ಭಾಗ್ಯ ಕೂಡಿಬಂದಿಲ್ಲ ಹೇಳಿಕೊಂಡೊದ್ದರು.

ಸಂದರ್ಶನಲ್ಲಿ ತಾನು ಹಲವು ಭಾರಿ ಪ್ರೀತಿಯಲ್ಲಿ ಬಿದ್ದಿದ್ದೆ, ಆದರೆ ಅದು ಮದುವೆ ತನಕ ಸಂಬಂಧ ಗಟ್ಟಿಯಾಗಿ ಉಳಿದಿರಲಿಲ್ಲ ಎಂದು ಬಹಿರಂಗಪಡಿಸಿದರು.

ತಮ್ಮ ಪ್ರೀತಿಯ ಸಂಬಂಧಗಳು ಮದುವೆಗೆ ಹತ್ತಿರವಾಗುತ್ತಿದ್ದ ಹಾಗೇ ಮುರಿದಿಬಿದ್ದಿದೆ. ತನ್ನ ಮೊದಲ ಪ್ರೀತಿ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾಗ ಎಂದಿದ್ದರು. ಈ ಸಂದರ್ಭದಲ್ಲಿ ಅಜ್ಜಿಯ ಅನಾರೋಗ್ಯ ಹಿನ್ನೆಲೆ ದೇಶಕ್ಕೆ ವಾಪಾಸ್ಸಾಗಬೇಕಾಯಿತು.  ಆಗ ಪ್ರೀತಿಸಿದ ಹುಡುಗಿ ಭಾರತಕ್ಕೆ ಬರಲಾಗದೆ ನನ್ನಿಂದ್ದ ದೂರವಾದಳು.

1970 ಮತ್ತು 80 ರ ದಶಕದಲ್ಲಿ ಬೆಳ್ಳಿತೆರೆಯನ್ನು ಆಳಿದ ಬಾಲಿವುಡ್ ಐಕಾನ್ ಸಿಮಿ ಗರೆವಾಲ್ ಅವರೊಂದಿಗೆ ರತನ್ ಟಾಟಾ ಸಂಬಂಧ ಸುದ್ದಿಯಲ್ಲಿತ್ತು. ಇವರಿಬ್ಬರು ಗಂಭೀರವಾಗಿ ಪ್ರೀತಿಸುತ್ತಿದ್ದರು. ಮದುವೆ ಆಗುವವರೆಗೂ ಇವರ ಸಂಬಂಧ ಗಟ್ಟಿಯಾಗಿದ್ದರು, ನಾನಾ ಕಾರಣಗಳಿಂದ ದೂರವಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ