Ratan Tata passed away: ಭಾರತದ ರತನ್ ಟಾಟಾ ಇನ್ನಿಲ್ಲ

Krishnaveni K

ಗುರುವಾರ, 10 ಅಕ್ಟೋಬರ್ 2024 (07:26 IST)
ಮುಂಬೈ: ದೇಶ ಕಂಡ ಅಗ್ರಗಣ್ಯ ಉದ್ಯಮಿ, ಸಮಾಜ ಸೇವಕ ರತನ್ ಟಾಟಾ ಅನಾರೋಗ್ಯದಿಂದಾಗಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಮೊನ್ನೆಯಷ್ಟೇ ಮುಂಬೈನ ಆಸ್ಪತ್ರೆಗೆ ದಾಖಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ನಿಧನದ ಸುದ್ದಿ ಇಡೀ ದೇಶವೇ ಕಂಬನಿ ಮಿಡಿಯುವಂತೆ ಮಾಡಿದೆ.

1937 ರಲ್ಲಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿ ಪುತ್ರನಾಗಿ ಜನಿಸಿದರು. 2008 ರಲ್ಲಿ ಅವರಿಗೆ ಭಾರತ ಸರ್ಕಾರ ಅತ್ಯುನ್ನತ ಪದ್ಮ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಿತ್ತು. ಅವಿವಾಹಿತರಾಗಿದ್ದ ರತನ್ ಟಾಟಾ ಉದ್ಯಮಿಯಾಗಿ ದೇಶಕ್ಕಾಗಿ ತಮ್ಮ ಜೀವನ ಮುಡಿಪಿಟ್ಟರು.

ಅವರ ನಿಧನ ಸುದ್ದಿ ಕೇಳಿ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ ದೇಶಕ್ಕೆ ಏನೇ ಕಷ್ಟ ಬಂದರೂ ಮೊದಲಿಗರಾಗಿ ಸಹಾಯ ಹಸ್ತ ಚಾಚುತ್ತಿದ್ದರು. ಅವರ ಜೊತೆಗೆ ಕಳೆದ ಪ್ರತಿಯೊಂದು ಕ್ಷಣವೂ ನನ್ನ ನೆನಪಿನಲ್ಲಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಗಾಗ ಅವರು ಗುಜರಾತ್ ಗೆ ಭೇಟಿ ನೀಡುತ್ತಿದ್ದರು. ದೆಹಲಿಗೆ ಬಂದಾಗಲೂ ಅವರ ಮತ್ತು ನನ್ನ ನಡುವಿನ ಬಾಂಧವ್ಯ ಮುಂದುವರಿಯಿತು ಎಂದು ಭಾವುಕರಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ