ಭಾರತದ ಹೊರತಾಗಿ ಈ ಹತ್ತು ರಾಷ್ಟ್ರಗಳಲ್ಲಿ ನಡೆಯುತ್ತೆ ದೀಪಾವಳಿ ಸಂಭ್ರಮ!
ಸೋಮವಾರ, 5 ನವೆಂಬರ್ 2018 (06:53 IST)
ನವದೆಹಲಿ: ದೀಪಾವಳಿ ಭಾರತೀಯರಿಗೆ ಮಾತ್ರ ಸಂಭ್ರಮದ ಹಬ್ಬವಲ್ಲ. ಭಾರತದ ಹೊರತಾಗಿ ವಿಶ್ವದ ಕೆಲವು ರಾಷ್ಟ್ರಗಳು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅವು ಯಾವುವು ನೋಡೋಣ.
ಭಾರತೀಯರು ಹೆಚ್ಚಿರುವ ಫಿಜಿ, ಇಂಡೋನೇಷ್ಯಾ, ಮಾರಿಷಸ್, ನೇಪಾಳ,ಶ್ರೀಲಂಕಾ, ಕೆನಡಾ, ಸಿಂಗಾಪುರ್, ಬ್ರಿಟನ್, ಟ್ರಿನಿಡಾಡ್ ಮತ್ತು ಟೊಬೇಗೋ ರಾಷ್ಟ್ರಗಳಲ್ಲೂ ದೀಪಾವಳಿ ಹಬ್ಬದ ಆಚರಣೆ ಬಲು ಜೋರಾಗಿ ನಡೆಯುತ್ತದೆ.
ಈ ರಾಷ್ಟ್ರಗಳಲ್ಲಿ ಹಿಂದೂ ಜನಸಂಖ್ಯೆ ಇರುವ ಕಾರಣ ಮತ್ತು ಭಾರತೀಯ ಸಂಜಾತರು ಇರುವ ಕಾರಣ ದೀಪಾವಳಿಯನ್ನು ನಮ್ಮ ರಾಷ್ಟ್ರದಲ್ಲಿ ಆಚರಿಸುವಂತೆಯೇ ಬೆಳಕಿನ ಹಬ್ಬವಾಗಿ ಆಚರಿಸಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.