ಬೇರೆಯವರನ್ನು ಮದ್ವೆಯಾಗಲು ಓಡಿಹೋದ 4 ಮಕ್ಕಳ ತಾಯಿ : ಮುಂದೇನಾಯ್ತು ?

ಶನಿವಾರ, 6 ಮೇ 2023 (11:41 IST)
ಪಾಟ್ನಾ : ಬಿಹಾರದ ಮಹಿಳೆಯೊಬ್ಬಳು ಮತ್ತೊಬ್ಬನನ್ನ ಮದುವೆಯಾಗಲು ತನ್ನ ನಾಲ್ಕು ಮಕ್ಕಳನ್ನು ಬಿಟ್ಟು ಓಡಿಹೋಗಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ.
 
ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಅಮೋದ್ ಮಹತೋ ತನ್ನ ಪತ್ನಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದನು. ಬ್ಯಾಂಕ್ಗೆ ಹೋಗುವುದಾಗಿ ಹೇಳಿ ಹೋಗಿದ್ದ ಪತ್ನಿ, ಸಂಜೆಯಾದರೂ ವಾಪಸ್ ಮನೆಗೆ ಹಿಂದಿರುಗದಿದ್ದಾಗ ಪತಿ ಕಿಡ್ನ್ಯಾಪ್ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. 

ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆಕೆ ಮತ್ತೊಬ್ಬನೊಂದಿಗೆ ಓಡಿಹೋಗಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ಆಕೆಗೆ ಮದುವೆಯ ಆಮಿಷ ಒಡ್ಡಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ