ಇಹಲೋಕ ತ್ಯಜಿಸಿದ ಮೇಲೂ ಜಯಲಲಿತಾ ಪಕ್ಷದೊಂದಿಗೆ ಕರುಣಾನಿಧಿಗೆ ತಿಕ್ಕಾಟ
ಈ ಸಂದರ್ಭದಲ್ಲಿ ಜಯಲಲಿತಾ ಸಮಾಧಿಗೆ ಅವಕಾಶ ಮಾಡಿಕೊಟ್ಟಿರುವಾಗ ಕರುಣಾನಿಧಿಗೆ ಯಾಕೆ ಅವಕಾಶ ಕೊಡುತ್ತಿಲ್ಲ. ಏಳು ದಿನಗಳ ಶೋಕಾಚರಣೆ ಮಾಡುತ್ತೀರಿ. ಹಾಗಿದ್ದರೆ ಸಮಾಧಿಗೆ ಜಾಗ ಕೊಡಲು ಹಿಂದೇಟು ಹಾಕುತ್ತಿರುವುದೇಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಆದರೆ ಕರುಣಾನಿಧಿ ಹಾಲಿ ಸಿಎಂ ಅಲ್ಲ ಎಂದು ಎಐಎಡಿಎಂಕೆ ವಾದ ಮಂಡಿಸಿದೆ. ಜಯಲಲಿತಾಗೆ ತಮ್ಮ ರಾಜಕೀಯ ಗುರುವಿನ ಜತೆಗೆ ಸಮಾಧಿ ಮಾಡಲು ಅವಕಾಶ ಕೊಟ್ಟಿರುವಾಗ ಕರುಣಾನಿಧಿಗೆ ಯಾಕೆ ಕೊಡುತ್ತಿಲ್ಲ ಎಂದು ಡಿಎಂಕೆ ಬೇಸರ ವ್ಯಕ್ತಪಡಿಸಿದೆ. ಅಂತೂ ಪ್ರಮುಖ ನಾಯಕನೊಬ್ಬನ ಅಗಲುವಿಕೆಯ ಸಂದರ್ಭದಲ್ಲೂ ಈ ರೀತಿಯ ರಾಜಕೀಯ ಕೆಸರೆರಚಾಟ ನಡೆಯುತ್ತಿರುವುದು ವಿಪರ್ಯಾಸ.