ಜನಗಣತಿಯಲ್ಲಿ ಬಹಿರಂಗವಾದ ಅಚ್ಚರಿ ಮಾಹಿತಿ

ಗುರುವಾರ, 25 ಆಗಸ್ಟ್ 2016 (09:42 IST)
ಇತ್ತೀಚಿಗೆ ಬಿಡುಗಡೆಯಾದ ಜನಗಣತಿ ಡೇಟಾ ವಿವಿಧ ಧರ್ಮಗಳಲ್ಲಿ ಪ್ರಚಲಿತದಲ್ಲಿರುವ ವಿಚ್ಛೇದನ, ಪ್ರತ್ಯೇಕತೆ ಕುರಿತಂತೆ ಚಕಿತಗೊಳಿಸುವ ಮಾಹಿತಿಗಳನ್ನು ಹೊರಹಾಕಿದೆ. 

ಇತರ ಎಲ್ಲ ಸಮುದಾಯಗಳಿಗೆ ಹೋಲಿಸಿದರೆ ಹಿಂದೂಗಳಲ್ಲಿ ವಿಚ್ಛೇದನ ಪ್ರಮಾಣ ಕಡಿಮೆ ಇದ್ದು ಸಾವಿರಕ್ಕೆ 1.8ರಷ್ಟು ಪ್ರಮಾಣದಲ್ಲಿದೆ. ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಂ ಧರ್ಮದವರಲ್ಲಿ ವಿಚ್ಛೇದನ ಪ್ರಮಾಣ ಅತ್ಯಧಿಕವಾಗಿದೆ. ಈ ಸಮುದಾಯದಲ್ಲದು ಸಾವಿರಕ್ಕೆ 3.4ರಷ್ಟಿದೆ ಎಂದು ಸರ್ವೇ ಬಹಿರಂಗ ಪಡಿಸಿದೆ. 
 
ತಜ್ಞರ ಪ್ರಕಾರ, ಮುಸ್ಲಿಂ ಸಮುದಾಯದವರಲ್ಲಿ ಡಿವೋರ್ಸ್ ಹೆಚ್ಚು ಪ್ರಚಲಿತವಾಗಿದ್ದು, ಟ್ರಿಪಲ್ ತಲಾಖ್ ಅವಕಾಶ ಭಾಗಶಃ ಇದಕ್ಕೆ ಕಾರಣವೆಂದು ಊಹಿಸಲಾಗಿದೆ.
 
ಮುಸ್ಲಿಮರಲ್ಲಿ ಮಹಿಳಾ ವಿಚ್ಛೇದನದ ಪಾಲು ಸಾವಿರಕ್ಕೆ 5ದಿದ್ದರೆ, ಹಿಂದೂ, ಸಿಖ್ ಮತ್ತು ಜೈನರಲ್ಲಿದು 2-3(1000ಕ್ಕೆ) ಎಂದು ತಿಳಿದು ಬಂದಿದೆ. 
 
ಕೇವಲ ಮುಸ್ಲಿಂ ಸಮುದಾಯದವರಲ್ಲಷ್ಟೇ ಅಲ್ಲ, ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮಿಯರಲ್ಲೂ ವಿಚ್ಛೇದನ ಮತ್ತು ಪ್ರತ್ಯೇಕತೆ ಪ್ರಮಾಣ ಹೆಚ್ಚಿದ್ದು, ಜೈನ್ ಮತ್ತು ಸಿಖ್‌ರಲ್ಲಿ ಅದು ಕಡಿಮೆ ಇದೆ. 
 
ಇದು 2011ರ ಜನಗಣತಿಯಲ್ಲಿ ದೊರೆತ ಫಲಿತಾಂಶವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ