ಜೈಸಲ್ಮೇರ್ ನಲ್ಲಿ ಬಿಎಸ್ ಎಫ್ ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ ಪ್ರಧಾನಿ ಮೋದಿ

ಶನಿವಾರ, 14 ನವೆಂಬರ್ 2020 (12:01 IST)
ನವದೆಹಲಿ : ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಜೈಸಲ್ಮೇರ್ ಗೆ ಭೇಟಿ ನೀಡಲಿದ್ದಾರೆ.

ಇಂದು ಪ್ರಧಾನಿ ಮೋದಿ ಜೈಸಲ್ಮೇರ್ ನಲ್ಲಿ ಬಿಎಸ್ ಎಫ್ ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿಗೆ ಸಿಡಿಎಸ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.

ಹಾಗೇ ಪ್ರಧಾನಿ ಮೋದಿ ಟ್ಈಟ್ ಮೂಲಕ ದೇಶದ ಸಮಸ್ತ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ದೀಪಾವಳಿ ಎಲ್ಲರಿಗೂ ಉತ್ತಮ ಭವಿಷ್ಯ, ಸಂತೋಷ ನೀಡಲಿ ಎಂದು ಹಾರೈಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ