ಪೋನಿನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನಿಗೆ ಮಹಿಳೆ ಮಾಡಿದ್ದೇನೆ ಗೊತ್ತಾ?

ಶನಿವಾರ, 2 ಫೆಬ್ರವರಿ 2019 (09:13 IST)
ಹೈದರಾಬಾದ್ : 24 ವರ್ಷದ ಮಹಿಳೆಯೊಬ್ಬಳು ತನಗೆ ಫೋನ್ ಮಾಡಿ, ಮೆಸೇಜ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನೊಬ್ಬನನ್ನು ಅಪಹರಿಸಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಮಹಿಳೆ ವೃತ್ತಿಯಲ್ಲಿ ಸಾಫ್ಟ್‌ ವೇರ್ ಎಂಜಿನಿಯರ್  ಆಗಿದ್ದು, ಮಹಿಳೆಯ ಗೆಳತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನು ಹೇಗೋ ಆಕೆಯ ಫೋನ್ ನಂಬರ್ ಪಡೆದು ಕಾಲ್ ಹಾಗೂ ಮೆಸೇಜ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತ ವಿಪರೀತ ಕಾಟ ಕೊಡುತ್ತಿದ್ದನು.

 

ಆತನ ವರ್ತನೆಯಿಂದ ಬೇಸತ್ತ ಮಹಿಳೆ ಆತನಿಗೆ ತಕ್ಕ ಪಾಠ ಕಲಿಸಬೇಕೆಂದು ಆತನಿಗೆ ಫೋನ್ ಮಾಡಿ  ಸ್ಥಳವೊಂದಕ್ಕೆ ಬರಲು  ಹೇಳಿ ತನ್ನ ಸ್ನೇಹಿತೆಯರ ಸಹಾಯದಿಂದ ಆತನನ್ನು ಕಿಡ್ಯಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಿಗ್ಗಾ-ಮುಗ್ಗಾ ಥಳಿಸಿದ್ದಾಳೆ.

ಆದರೆ ಆಕೆಯಿಂದ ತಪ್ಪಿಸಿಕೊಂಡ ಕಾಮುಕ ಆಸ್ಪತ್ರೆಗೆ ದಾಖಲಾಗಿ ನಂತರ ಗೋಪಾಲ್‍ ಪುರಂ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ಪೊಲೀಸರು ಕಾನೂನನ್ನು ಉಲ್ಲಂಘಿಸಿ ಕಿಡ್ನಾಪ್ ಮಾಡಿ ಥಳಿಸಿದಕ್ಕೆ ಮಹಿಳೆಯ ವಿರುದ್ಧ ಅಪಹರಣ ಹಾಗೂ ಕೊಲೆ ಪ್ರಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ