ಹೇಳಿದ ಸಮಯಕ್ಕೆ ತವರು ಮನೆಯಿಂದ ವಾಪಾಸ್ಸಾಗಲಿಲ್ಲವೆಂದು ಪತ್ನಿಗೆ ತಲಾಖ್ ನೀಡಿದ ಪತಿಮಹಾಶಯ

ಗುರುವಾರ, 31 ಜನವರಿ 2019 (08:43 IST)
ಲಖನೌ : ತವರು ಮನೆಗೆ ಹೋದ ಪತ್ನಿ ಹೇಳಿದ ಸಮಯಕ್ಕೆ ಸರಿಯಾಗಿ ಬರಲಿಲ್ಲವೆಂದು ಪತಿ ಆಕೆಗೆ ಫೋನಿನಲ್ಲೇ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಈಟಾದಲ್ಲಿ ನಡೆದಿದೆ.

ಅಫ್‍ ರೋಜ್ ಪತ್ನಿ ತಲಾಖ್ ನೀಡಿದ ಪತಿಮಹಾಶಯ. ಹೈದರಾಬಾದ್‍ ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಒಂದೂವರೆ ವರ್ಷದ ಹಿಂದೆ ಶಂಬುಲ್ ಬೇಗಂಳನ್ನು ಮದುವೆ ಆಗಿದ್ದನು. ಮದುವೆ ಆದ ಬಳಿಕ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ.

 

ಜ.18ರಂದು ಅನಾರೋಗ್ಯದಿಂದ ಬಳುತ್ತಿದ್ದ ತನ್ನ ಅಜ್ಜಿಯನ್ನು ನೋಡಲು ತವರು ಮನೆಗೆ ಹೋಗಲು ಶಂಬುಲ್ ಬೇಗಂ 30 ನಿಮಿಷಗಳ ಕಾಲಾವಕಾಶ ಕೇಳಿದ್ದಳು. ಆದರೆ ತವರು ಮನೆಗೆ ಹೋದ  ಶಂಬುಲ್ ಬೇಗಂ 10 ನಿಮಿಷ ತಡ ಮಾಡಿದ್ದಾಳೆ.

 

ಇದರಿಂದ ಸಿಟ್ಟಾದ ಪತಿ  ತನ್ನ ಪತ್ನಿಗೆ ಫೋನ್ ಮಾಡಿ ತಲಾಖ್ ನೀಡಿದ್ದಾನೆ. ಈ ಬಗ್ಗೆ ಪತಿಯ ಕುಟುಂಬದವರ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಇದನ್ನು ವರದಕ್ಷಿಣೆ ಕಿರುಕುಳ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

                                                                                                      

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ