ವಿಶ್ವದ ಅತಿದೊಡ್ಡ ತಾತ್ಕಾಲಿಕ ಕೊರೊನಾ ಆಸ್ಪತ್ರೆ ನಿರ್ಮಾಣವಾಗಿದ್ದೆಲ್ಲಿ ಗೊತ್ತಾ?
ಸೋಮವಾರ, 29 ಜೂನ್ 2020 (08:22 IST)
ನವದೆಹಲಿ : ದೆಹಲಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ವಿಶ್ವದ ಅತಿದೊಡ್ಡ ತಾತ್ಕಾಲಿಕ ಕೊರೊನಾ ಆಸ್ಪತ್ರೆಯನ್ನು ನಿರ್ಮಿಸಿದೆ.
ದಕ್ಷಿಣ ದೆಹಲಿಯ ಛತ್ತರಪುರದಲ್ಲಿರುವ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕಾಂಪ್ಲೆಸ್ ನಲ್ಲಿ 10,200 ಬೆಡ್ ಗಳ ಬೃಹತ್ ಕೊರೊನಾ ಆಸ್ಪತ್ರೆಯನ್ನು ಸುಮಾರು ಹತ್ತು ದಿನಗಳಲ್ಲಿ ಐಟಿಬಿಪಿ ಪಡೆ ನಿರ್ಮಿಸಿದೆ. ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಈ ತಾತ್ಕಾಲಿಕ ಕೊರೊನಾ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.
ಚೀನಾದ ವುಹಾನ್ ನಲ್ಲಿ ನಿರ್ಮಿಸಿದ ತಾತ್ಕಾಲಿಕ ಕೊರೊನಾ ಆಸ್ಪತ್ರೆಗಿಂತ ಇದು ಹತ್ತು ಪಟ್ಟು ದೊಡ್ಡದು ಎನ್ನಲಾಗಿದೆ. ಹಾಗೇ ಇದಕ್ಕೆ ‘ಸರ್ದಾರ್ ಪಾಟೇಲ್ ಕೊವಿಡ್ ಕೇರ್’ ಎಂದು ಕೇಂದ್ರ ಸರ್ಕಾರ ಹೆಸರಿಟ್ಟಿದೆ.