ಗಂಡು ಮಗುವಿನ ಮೇಲಿನ ಆಸೆಗೆ ಹುಟ್ಟಿದ ಹೆಣ್ಣುಮಗುವಿಗೆ ತಾಯಿ ಮಾಡಿದ್ದೇನು ಗೊತ್ತಾ?
ಬಳಿಕ ಮನೆಯವರ ಬಳಿ ಮಗು ಕಾಣುತ್ತಿಲ್ಲ ಎಂದು ಸುಳ್ಳು ಹೇಳಿದ್ದಾಳೆ. ಎಲ್ಲಾ ಕಡೆ ಹುಡುಕಾಡಿದ ಮನೆಯವರಿಗೆ ಮಗು ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದಾಗ ಮಗುವಿನ ಶವ ನೀರಿನ ಡ್ರಮ್ ನಲ್ಲಿ ಪತ್ತೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ತಾಯಿಯ ಮೇಲೆ ಅನುಮಾನಗೊಂಡ ಪೋಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.