ಪತಿಯನ್ನು ತೊರೆದು ಪ್ರಿಯಕರನೊಂದಿಗೆ ವಿವಾಹವಾಗಲು ಮಹಿಳೆ ಮಾಡಿದ್ದೇನು ಗೊತ್ತಾ?

ಮಂಗಳವಾರ, 12 ಡಿಸೆಂಬರ್ 2023 (10:09 IST)
ಪತಿಯನ್ನು ತೊರೆದು ಪ್ರಿಯಕರನೊಂದಿಗೆ ವಿವಾಹವಾಗಲು ಅಡ್ಡಿಯಾದ ತನ್ನ ಹೆತ್ತ ಕಂದಮ್ಮಗಳನ್ನೇ ಹತ್ಯೆ ಮಾಡಿದ ಮಹಿಳೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  
 
ತನ್ನ ಪತಿಗೆ ವಿಚ್ಛೇದನ ನೀಡಿ ಪ್ರಿಯಕರನ ಜತೆ ಹಾಸಿಗೆ ಹಂಚಿಕೊಳ್ಳಲು ತನ್ನ ಎಳೆಯ ಪ್ರಾಯದ ಇಬ್ಬರು ಕಂದಮ್ಮಗಳನ್ನು ಕುತ್ತಿಗೆ ಹಿಚುಕಿ ಮಹಿಳೆ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗಂಡನೊಡನೆ ಬಾಳ್ವೆ ಬೇಸರಗೊಂಡಿದ್ದ ಈ ಮಹಿಳೆ ಪ್ರಿಯಕರನ ಜತೆ ಸಂಗ ಬಯಸಿದಳು.
 
ಅದಕ್ಕಾಗಿ ಈ ದುಷ್ಟ ಮಹಿಳೆ ತಾನೇ ಹೆತ್ತ ಮಕ್ಕಳನ್ನು ಬಲಿಕೊಡಲು ಹೇಸಲಿಲ್ಲ. ಜಿಲ್ಲೆಯ ರಾಮಗಢ್ ಸೆಥಾನ್ ಪಟ್ಟಣದಲ್ಲಿ  ಈ ಘಟನೆ ನಡೆದಿದ್ದು, ಶುಕ್ರವಾರ ಸಂಜೆ ಎಫ್‌ಐಆರ್ ದಾಖಲು ಮಾಡಲಾಗಿದೆ.

ಆರೋಪಿಯ ಪತಿ ತನ್ನ ಪತ್ನಿ ಮಕ್ಕಳನ್ನು ಹತ್ಯೆ ಮಾಡಿರುವ ಬಗ್ಗೆ ಸಾಕ್ಷ್ಯವನ್ನು ನೀಡಿದರು. ಆರೋಪಿ ಪ್ರಿಯಾ ಎಂಬ ಯುವತಿ ಮತ್ತು ಅವಳ ಪ್ರಿಯಕರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ